ನಾಡ ಹಬ್ಬ ಮೈಸೂರು ದಸರಾ ಮಹೋತ್ಸವ : ವಿಶೇಷ ಸಾರಿಗೆ ಸೌಲಭ್ಯ ಕಲ್ಪಿಸಿಕೊಟ್ಟ ಜಿ.ಟಿ ದೇವೆಗೌಡ

ನವರಾತ್ರಿ ಎಂದ ತಕ್ಷಣ ನಮಗೆ ನೆನಪಾಗುವುದು ಮೈಸೂರು ದಸರಾ ಉತ್ಸವ. ಆ ಆಚರಣೆ, ವಿಜೃಂಭಣೆ, ಇಡೀ ನಗರದಲ್ಲಿನ ಸಡಗರ ಕಣ್ತುಂಬಿಕೊಳ್ಳಲು ಪುಣ್ಯ ಮಾಡಿರಬೇಕು. ಒಂದು ಕಾಲದಲ್ಲಿ ಆಳರಸರ ಮಹೋತ್ಸವವಾಗಿ ಮೆರೆದು ಇಂದು ಬದಲಾದ ಕಾಲಘಟ್ಟದಲ್ಲಿ ನಾಡಹಬ್ಬವೆಂದು ಕರೆಯಲ್ಪಡುತ್ತಿರುವ ಮೈಸೂರು ದಸರಾ ಮಹೋತ್ಸವಕ್ಕೆ ನಾಲ್ಕು ಶತಮಾನಗಳಿಗೂ ಹೆಚ್ಚಿನ ಇತಿಹಾಸವಿದೆ. ನಮ್ಮ ಭಾರತೀಯ ಸಂಸ್ಕೃತಿಯ ಚರಿತ್ರೆಯಲ್ಲೇ ಇಷ್ಟೊಂದು ಸುದೀರ್ಘ ಕಾಲ ನಡೆದು ಬಂದಿರುವ ಮತ್ತೊಂದು ಹಬ್ಬ ಕಾಣಸಿಗುವುದು ಬಹಳ ಅಪರೂಪ.

 ಪ್ರತಿ ವರ್ಷ ಇದರ ಪ್ರಖ್ಯಾತಿ ಹೆಚ್ಚುತ್ತಿದ್ದು ದೇಶ ವಿದೇಶದಿಂದ ಪ್ರಯಾಣಿಕರು ಈ ಮನಮೋಹಕ ಹಬ್ಬವನ್ನು ಕಣ್ತುಂಬಿಕೊಳ್ಳಲು ಮುಗಿಬೀಳುತ್ತಾರೆ. ಈ ಬಾರಿ ಕುಮಾರಸ್ವಾಮಿ ಅವರ ನೇತೃತ್ವದ ಸರಕಾರ ನಮ್ಮ ನಾಡಹಬ್ಬ ದಸರಾವನ್ನು ಮತ್ತಷ್ಟು ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿದೆ. ಅಕ್ಟೋಬರ್ 10 ರಂದು ಪ್ರಾರಂಭವಾಗುವ ಮೈಸೂರು ದಸರಾ ಅಕ್ಟೋಬರ್ 20 ರಂದು ವಿಜಯದಶಮಿ ಆಚರಣೆಯೊಂದಿಗೆ ಅಂತ್ಯಗೊಳ್ಳುತ್ತದೆ.  ಈ ಬಾರಿ ದಸರಾವನ್ನು ಖ್ಯಾತ ಉದ್ಯಮಿ-ಲೇಖಕಿ ಶ್ರೀಮತಿ ಸುಧಾ ಮೂರ್ತಿ ಅವರು ಉದ್ಘಾಟಿಸಲಿದ್ದಾರೆ.
ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ದಸರಾ ಉತ್ಸವಕ್ಕೆ ಅಧಿಕೃತ ಅಹ್ವಾನ ನೀಡಲು ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಆಗಮಿಸಿದ್ದರು. ಇದೆ ಹಿನ್ನಲೆಯಲ್ಲಿ ಮಾತನಾಡಿದ ಅವರು ” ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಅಂಗವಾಗಿ ಬೆಂಗಳೂರಿನಿಂದ ಮೈಸೂರಿಗೆ 150 ರೂ. ಪ್ರಯಾಣ ದರದಲ್ಲಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಅದಲ್ಲದೆ ಏರ್ ಇಂಡಿಯಾದಿಂದ ವಿಶೇಷ ವಿಮಾನ ವ್ಯವಸ್ಥೆ ಮಾಡಿದ್ದೂ, ‘ಆಕಾಶ ಅಂಬಾರಿ’ ವ್ಯವಸ್ಥೆ ಕಲ್ಪಿಸಲಾಗಿದೆ. ಮೈಸೂರು ದಸರಾ ಕಣ್ತುಂಬಿಕೊಳ್ಳಲು ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು” ಎಂದು ಅವರು ತಿಳಿಸಿದ್ದಾರೆ.
ಹಿಂದಿನ ಬಾರಿ ಮೈಸೂರು ದಸರಾ ಆಚರಣೆ ಕೊಂಚ ಮಂಕಾಗಿದ್ದು, ಈ ಬಾರಿ ಕುಮಾರಸ್ವಾಮಿ ಅವರ ಸರ್ಕಾರ ಆಡಳಿತದಲ್ಲಿ ಇರುವುದರಿಂದ ಮೈಸೂರು ದಸರಾ ಯಶಸ್ವಿಯಾಗಲಿದೆ ಎಂಬುವುದರಲ್ಲಿ ಸಂಶಯವಿಲ್ಲ.

Leave a Reply