ಮೀಟರ್ ಬಡ್ಡಿ ದಂದೆಕೋರರ ಬೇಟೆ ಶುರು ಮಾಡಿರುವ ಕುಮಾರಸ್ವಾಮಿ ಸರ್ಕಾರ

ಎಚ್.ಡಿ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದ ಆದ್ಯಂತ ಪ್ರಗತಿಗೆ ಕೇಂದ್ರೀಕರಿಸುತಿದ್ದಾರೆ. ರಾಜ್ಯದ ಅಭಿವೃದ್ಧಿ ಮಾತ್ರವಲ್ಲದೆ ಅವರ ಸುಭದ್ರತೆ ಕಡೆಗೂ ಗಮನ ಹರಿಸಿ, ಸಮಾಜದ ಕ್ರಿಮಿ ಕೀಟಗಳಾದ ರೌಡಿಗಳು, ಗೂಂಡಾಗಳು ಹಾಗು ಮೀಟರ್ ಬಡ್ಡಿ ದಂದೆಕೋರರನ್ನು ಹೊಸೆದು ಹಾಕಲು ಮಾಸ್ಟರ್ಪ್ಲಾನ್ ಮಾಡಿದ್ದಾರೆ.
ಇಷ್ಟು ದಿನ ನಿಷ್ಕ್ರಿಯವಾಗಿದ್ದ ಸಿಸಿಬಿ ಇಲಾಖೆಗೆ ಸಂಪೂರ್ಣ ಸ್ವತಂತ್ರ ನೀಡಿ, ಹಿಂದೆ ಅವರು ಎದುರಿಸುತ್ತಿದ್ದ ರಾಜಕೀಯ ಒತ್ತಡಗಳಿಗೆ ಒಳಗಾಗದಂತೆ ನೋಡಿಕೊಳ್ಳುವುದಾಗಿ ಧೈರ್ಯ ತುಂಬಿದ್ದಾರೆ.

ಇದೆ ಹಿನ್ನಲ್ಲೆಯಲ್ಲಿ ಹೊಸ ಹುರುಪಿನೊಂದಿಗೆ ಕೆಲಸ ಮಾಡುತ್ತಿರುವ ಸಿಸಿಬಿ ಪೊಲೀಸರು ಮೀಟರ್‌ ಬಡ್ಡಿ ದಂಧೆ ನಡೆಸುತ್ತಿದ್ದವರ ಮೇಲೆ ಗುರುವಾರ ಭಾರೀ ದಾಳಿ ನಡೆಸಿದ್ದು 9 ಮಂದಿಯನ್ನು ಬಂಧಿಸಿ ಲಕ್ಷಾಂತರ ರೂಪಾಯಿ ನಗದನ್ನು ವಶಕ್ಕೆ ಪಡೆದಿದ್ದಾರೆ.
ಕೆ.ಆರ್‌‌.ಮಾರುಕಟ್ಟೆ ಪ್ರದೇಶ ಸೇರಿದಂತೆ ವಿವಿಧೆಡೆ 15 ಮಂದಿ ದಂಧೆಕೋರರ ನಿವಾಸಗಳು ಮತ್ತು ಕಚೇರಿಗಳ ಮೇಲೆ ದಾಳಿ ಪೊಲೀಸರ ತಂಡಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಇದೆ ರೀತಿ ಕುಮಾರಸ್ವಾಮಿ ಅವರು ತಮ್ಮ ಆಡಳಿತದಲ್ಲಿ ಸಮಾಜದ ಅಪ್ರಯೋಜಕ ಕೀಟಗಳನ್ನು ನಾಶ ಮಾಡಿ ಸ್ವಚ್ಛ ಸಮಾಜವನ್ನು ನಮಗೆ ಒದಗಿಸಿ ಕೊಡಲಿದ್ದಾರೆ.

3 thoughts on “ಮೀಟರ್ ಬಡ್ಡಿ ದಂದೆಕೋರರ ಬೇಟೆ ಶುರು ಮಾಡಿರುವ ಕುಮಾರಸ್ವಾಮಿ ಸರ್ಕಾರ

  1. shivakumar says:

    ಸರ್ ನೀವೇನು ಹೇಳುತ್ತಿದ್ದೀರಿ ಆದರೆ ಬಡ್ಡಿ ವ್ಯವಹಾರ ಮಾಡುವವರು ಚೆನ್ನಾಗೇ ಬಡ್ಡಿ ವ್ಯವಹಾರವನ್ನು ನಡೆಸುತ್ತಿದ್ದಾರೆ

  2. Ravichandra says:

    Sir retion department kadenu gamana kodi 3 day’s enda bartidru work madkodtila sir

  3. ಮರೇಗೌಡ ಎನ್ says:

    ದಯವಿಟ್ಟು ಸಂಬಂಧ ಪಟ್ಟ ಇಲಾಖೆ ನೋಂದಣಿ ಸಂಖ್ಯೆ ನಮೂದಿಸಿ

Leave a Reply