ರೇವಣ್ಣ ಅಂದರೆ ಅಭಿವೃದ್ಧಿ, ಅಭಿವೃದ್ಧಿ ಎಂದರೆ ಅಭಿವೃದ್ಧಿ

ಲೋಕೋಪಯೋಗಿ ಸಚಿವ ಎಚ್.ಡಿ ರೇವಣ್ಣ ಅವರು ಅಧಿಕಾರಕ್ಕೆ ಬಂದು ಕೇವಲ ನಾಲ್ಕು ತಿಂಗಳಾಗಿದ್ದರು, ಅವರು ಅಭಿವೃದ್ಧಿಗೆ ಅಪಾರ ಪ್ರಮಾಣದಲ್ಲಿ ಶ್ರಮಿಸುತ್ತಿದ್ದಾರೆ. ಅಧಿಕಾರಕ್ಕೆ ಬಂದ ತಕ್ಷಣವೇ ಆಮೆಗತಿಯಲ್ಲಿ ಸಾಗುತಿದ್ದ ಹೆದ್ದಾರಿಗಳ ಕಾಮಗಾರಿಯ ಕಡೆ ಗಮನ ಹರಿಸಿ ಚುರುಕಿನಿಂದ ಕೆಲಸ ಸಾಗಿಸಬೇಕೆಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ರಾಜ್ಯದಲ್ಲಿ ಪ್ರಗತಿಯಲ್ಲಿರುವ 4 ಸಾವಿರ ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಗಳಾದ
– ಏನ್.ಎಚ್ – 275 : ಬೆಂಗಳೂರು – ಮೈಸೂರು
– ಏನ್.ಎಚ್ – 17 : ಗೋವಾ ಗಡಿಯಿಂದ ಕಾರವಾರ ಮೂಲಕ ಕುಂದಾಪುರ
– ಏನ್.ಎಚ್ – 206 : ತುಮಕೂರು – ಶಿವಮೊಗ್ಗ ನಾಲ್ಕು ಪಥ
– ಏನ್.ಎಚ್ – 150 : ಬಳ್ಳಾರಿ – ಹಿರಿಯೂರು
– ಏನ್.ಎಚ್ – 48 : ಬೆಂಗಳೂರು – ಹಾಸನ
ಅಲ್ಲದೆ ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ ನ ಯೋಜನಯನ್ನು ಕೂಡ ಎಚ್.ಡಿ ರೇವಣ್ಣ ಅವರು ವರ್ಷದೊಳಗೆ ಪೂರ್ಣಗೊಳಿಸಬೇಕೆಂದು ಪಣ ತೊಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಷ್ಟೆ ಅಲ್ಲದೆ ಮೇಕೆ ದಾಟು ಅಣೆಕಟ್ಟು ನಿರ್ಮಾಣಕ್ಕೂ ಛಲ ಬಿಡದೆ ಶ್ರಮಿಸುತ್ತಿದ್ದಾರೆ. ಇದೆ ಹಿನ್ನಲ್ಲೆಯಲ್ಲಿ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರೊಂದಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

ಹೀಗಾಗಿ ತಮ್ಮ ಕ್ಷೇತ್ರ ಮಾತ್ರವಲ್ಲದೆ ರಾಜ್ಯದ ಪ್ರಗತಿಗೋಸ್ಕರ ಕೆಲಸ ಮಾಡುತ್ತಿರುವ ರೇವಣ್ಣ ಅವರು ದೇಶದ ಎಲ್ಲ ಸಚಿವರಿಗೂ ಮಾದರಿ.

Leave a Reply