ಬಿಜೆಪಿ ಪಕ್ಷದ ನಿಜ ಬಣ್ಣವನ್ನು ಬಯಲು ಮಾಡಿದ ಅನಂತ್ ಕುಮಾರ್ ಹೆಗ್ಡೆ

ವಿನಾಶ ಕಾಲೇ ವಿಪರೀತ ಬುದ್ದಿ ಎಂಬಂತೆ ಕೇಂದ್ರ ಸಚಿವ ತಮ್ಮ ಪಕ್ಷದ ನಾಯಕರ ನಿಜ ಬಣ್ಣವನ್ನು ತಾವೇ ಬಯಲು ಮಾಡಿದ್ದಾರೆ.

ಗುರುವಾರ ಶಿರಸಿಯಲ್ಲಿ  ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ”ನಾವು ಇಲ್ಲಿ ಬಂದು ಕುಳಿತಿರುವುದು ರಾಜಕಾರಣ ಮಾಡಲಿಕ್ಕೆ. ರಾಜಕಾರಣ ಬಿಟ್ಟು ಬೇರೆನು ಮಾಡಬೇಕು. ರಾಜಕಾರಣ ಮಾಡುವುದಕ್ಕಾಗಿ ನಾವು ತಾಲೂಕು ಅಧ್ಯಕ್ಷ ಆಗಿದ್ದು, ತಾಲೂಕು ಪ್ರಮುಖ್‌ ಆಗಿದ್ದು, ಜಿಲ್ಲಾ ಪ್ರಮುಖ್‌ ಆಗಿದ್ದು. ನಾವೇನು ಇಲ್ಲಿ ಸಮಾಜ ಸೇವೆ ಮಾಡಲು ಬಂದು ಕುಳಿತಿಲ್ಲ” ಎಂದರು.
ಅನಂತ ಕುಮಾರ್ ಅವರು ಎಲ್ಲ ಬಿಜೆಪಿ ಪಕ್ಷದ ನಾಯಕರಂತೆ  ತಾವು ಏರಿದ ಏಣಿಯನ್ನೇ ಓದಿಯುತಿದ್ದಾರೆ.
ಪ್ರಜಾಪ್ರಭುತ್ವದ ನಮ್ಮ ನಾಡಿನಲ್ಲಿ ಪ್ರಜೆಗಳೇ ದೊರೆ. ಅವರ ಪ್ರತಿನಿಧಿಗಳಾದ ನಮಗೆ ಅವರ ಸೇವೆ ಮಾಡುವುದೇ ಮೂಲ ಕರ್ತವ್ಯ ಎಂದು ನಂಬಿರುವ ಜೆಡಿಎಸ್ ಪಕ್ಷ ಒಂದು ಕಡೆಯಾದರೆ, ನಾನು ಸಮಾಜ ಸೇವೆ ಮಾಡಲ್ಲ ಎಂದು ನಿಕೃಷ್ಟವಾಗಿ ಹೇಳುವ ಬಿಜೆಪಿ ಪಕ್ಷದ ನಾಯಕ ಒಂದು ಕಡೆ .

Leave a Reply