ಯಡಿಯೂರಪ್ಪನ ಹುಟ್ಟೂರು ಮಂಡ್ಯದಿಂದ ಮಗ ವಿಜಯೇಂದ್ರ ಕಣಕ್ಕಿಳಿಯುತ್ತಾರಾ?

ಕರ್ನಾಟಕ ಮುಖ್ಯಮಂತ್ರಿ ಪಟ್ಟಕ್ಕೆ ಬಕಪಕ್ಷಿಯಂತೆ ಕಾಯುತ್ತಿರುವ ಯಡಿಯೂರಪ್ಪ, ತನ್ನ ಮಗ ವಿಜಯೇಂದ್ರನನ್ನು ಮಂಡ್ಯ ಜಿಲ್ಲೆಯಿಂದ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ಮಂಡ್ಯ ಜಿಲ್ಲೆ ತನ್ನ ಹುಟ್ಟೂರಾದರು, ಚುನಾವಣೆಯಲ್ಲಿ ತನ್ನ ಸ್ವಂತ ಕ್ಷೇತ್ರದಿಂದ ಸ್ಪರ್ಧಿಸಲು ಧೈರ್ಯ ಸಾಲದೇ ಶಿವಮೊಗ್ಗದಿಂದ ಕಣಕ್ಕಿಳಿದರು .
ತನ್ನ ಒಬ್ಬ ಮಗ ರಾಘವೇಂದ್ರನನ್ನು ಶಿವಮೊಗ್ಗದಿಂದ ಕಣಕ್ಕಿಳಿಸಲು ಸಜ್ಜಾಗಿರುವ ಯಡಿಯೂರಪ್ಪಈಗ ತನ್ನ ಮತೊಬ್ಬ ಮಗ ವಿಜಯೇಂದ್ರನ ರಾಜಕೀಯ ಭವಿಷ್ಯವನ್ನು ಮಂಡ್ಯ ಜಿಲ್ಲೆಯಲ್ಲಿ ರೂಪಿಸಲು ಹೊರಟಿದ್ದಾರೆ.
ತಾನು ಹಾಗೂ ತನ್ನ ಮಕ್ಕಳೇ ಆಧಿಕಾರ ಚಲಾಯಿಸಬೇಕು ಎಂದು ಆಶಿಸುತ್ತಿರುವ ಯಡಿಯೂರಪ್ಪನಿಗೆ ‘ ಇದು ಕುಟುಂಬ ರಾಜಕಾರಣವಲ್ಲವಾ?’ ಎಂದು ರಾಜ್ಯದ ಜನತೆ ಟೀಕಿಸುತ್ತಿದ್ದಾರೆ.

Leave a Reply