ವಿಕಲಚೇತನ ವಿದ್ಯಾರ್ಥಿಗಳಿಗೆ ಕುಮಾರಸ್ವಾಮಿ ಸರ್ಕಾರ ನೀಡುತ್ತಿರುವ ಕೊಡುಗೆಗಳೇನು ಗೊತ್ತಾ ?

ರಾಜ್ಯದ ವಿವಿಧ ವಿಕಲಚೇತನರ ಸೇವಾ ಸಂಸ್ಥೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಸರಿಸುಮಾರು ಹತ್ತು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕನ್ನಡ ರಾಜ್ಯೋತ್ಸವಕ್ಕೆ ಕುಮಾರಸ್ವಾಮಿ ಅವರ ಸರ್ಕಾರ ಸಿಹಿ ಸುದ್ದಿ ನೀಡಿದೆ. ವಿಕಲಚೇತನ ವಿದ್ಯಾರ್ಥಿಗಳು ನ.1ರಿಂದ ಕ್ಷೀರಭಾಗ್ಯ ಯೋಜನಾ ವ್ಯಾಪ್ತಿಗೆ ಬರಲಿದ್ದಾರೆ.
ಯೋಜನೆಗಳ ಹಣದಲ್ಲಿ ಭ್ರಷ್ಟಾಚಾರ ಮಾಡಿದರೆ ಜೋಕೆ 
ನಗರದ ಶಿಕ್ಷಕರ ಸದನದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ವಿಕಲ ಚೇತನರ ಸೇವಾ ಸಂಸ್ಥೆಗಳ ಒಕ್ಕೂಟದ ವತಿಯಿಂದ ಸ್ಪಂದನ- 2018 ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು, ಹಲವು ಯೋಜನೆಗಳು ಹಾಗೂ ವಿಕಲಚೇತನ ಮಕ್ಕಳಿಗೆ ರಾಜ್ಯ ಬಜೆಟ್​ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.
ಈ ಯೋಜನೆಗಳ ಹಣದಲ್ಲಿ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಜೊತೆಗೆ ವಿಶೇಷ ಚೇತನ ಮಕ್ಕಳಿಗೆ ಪ್ರೋತ್ಸಾಹ ನೀಡಲು ಈ ಬಾರಿಯ ಬಜೆಟ್​ನಲ್ಲಿ ಅನುದಾನ ಮೀಸಲಿಟ್ಟಿದ್ದು, 21 ರೀತಿಯ ವ್ಯಕ್ತಿಗಳ ಸಮೀಕ್ಷೆ ನಡೆಸಲು 5 ಕೋಟಿ ರೂಪಾಯಿ, ಹಣಕಾಸು ಅಭಿವೃದ್ಧಿ ನಿಗಮದಿಂದ ಪಡೆಯಲಾದ ಸಾಲ ಮತ್ತು ಬಡ್ಡಿ ಮನ್ನಾಗೆ 4 ಕೋಟಿ ರೂಪಾಯಿ, 20 ಎಕರೆ ಜಾಗದಲ್ಲಿ ವಿಕಲಚೇತರಿಗೆ ತರಬೇತಿ ನೀಡಲು ಕಟ್ಟಡ ನಿರ್ಮಾಣ, ವಿದೇಶದಲ್ಲಿ ಪಿಹೆಚ್​ಡಿ ಪಡೆಯುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಒಂದು ಕೋಟಿ ರುಪಾಯಿ ಮೀಸಲಿಡಲಾಗಿದೆ ಎಂದರು.
ಅಂಗವಿಕಲರಿಗೆ ಒಲಂಪಿಕ್ಸ್ 
ಅಲ್ಲದೆ ವಿಕಲಚೇತನ ಮಕ್ಕಳಿಗಾಗಿ ಮಂಗಳೂರಿನಲ್ಲಿ ವಿಶ್ವಮಟ್ಟದ ಒಲಂಪಿಕ್ಸ್ ಕ್ರೀಡೆಯನ್ನು ಆಯೋಜಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದರು.
ದಿವ್ಯಾಂಗ ವಿದ್ಯಾರ್ಥಿಗಳಿಗೆ ಕೀಳರಿಮೆ ಬಾರದಂತೆ ನೋಡಿಕೊಂಡು ಕುಮಾರಸ್ವಾಮಿ ಸರ್ಕಾರ ಅವರಿಗೆ ದಾರಿದೀಪವಾಗಲಿದೆ. 

Leave a Reply