ನೊಂದ ಮಹಿಳೆಯ ಸಮಸ್ಯೆಯನ್ನು ಕುಮಾರಸ್ವಾಮಿ ಅವರು ಕೇವಲ ಒಂದು ಗಂಟೆಯಲ್ಲಿ ಹೇಗೆ ಪರಿಹರಿಸಿದರು ನೋಡಿ…!

ಮಾನ್ಯ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಮುಂಜಾನೆ ಮಾಧ್ಯಮದಲ್ಲಿ ಮಹಿಳೆ ಮೇಲೆ ಮೀಟರ್ ಬಡ್ಡಿ ದಂದೆಕೋರರ ದೌರ್ಜನ್ಯವನ್ನು ಗಮಿನಿಸಿ, ಆಕ್ರೋಶಗೊಂಡು ತಕ್ಷಣ ಕ್ರಮ ಕೈಗೊಂಡಿದ್ದಾರೆ.

ಆ ಮಾಧ್ಯಮವನ್ನು ಕೂಡಲೆ ಸಂಪರ್ಕಿಸಿ ಮಹಿಳೆಯ ಫೋನ್ ನಂಬರ್ ಅನ್ನು ಸಂಗ್ರಹಿಸಿ, ಅವರಿಗೆ ಕರೆ ಮಾಡಿ ಗೃಹ ಕಚೇರಿಗೆ ಬರಲು ಹೇಳಿದರು. ಮತ್ತೀಕೆರೆಯಾ ನೊಂದ ಮಹಿಳೆ, ಕುಮಾರಸ್ವಾಮಿ ಅವರ ಬಳಿ ಬಂದು ತಮ್ಮ ದುಃಖ ತೋಡಿಕೊಂಡರು. ನಂತರ 2 ಲಕ್ಷ ರುಪಾಯಿಗೆ 20 ಲಕ್ಷ ರೂಪಾಯಿ ಬಡ್ಡಿಯನ್ನು ನೀಡುವಂತೆ ಕಿರುಕಳಿಸಿ , ಲೈಂಗಿಕವಾಗಿಯು ಕಿರುಕಳ ನೀಡಿದುತಿದ್ದರು ಎಂದು ತಿಳಿದಮೇಲೆ, ಕುಮಾರಸ್ವಾಮಿ ಅವರು ನೊಂದ ಮಹಿಳಿಗೆ ಧೈರ್ಯ ತುಂಬಿ ಸಾಂತ್ವನ ಹೇಳಿದರು. ನಂತರ ಸಿಸಿಬಿ ಪೊಲೀಸರಿಗೆ, ಈ ದುಷ್ಕೃತ್ಯದಲ್ಲಿ ಪಾಲ್ಗೊಂಡಿರುವ ನಾರಾಯಣಪ್ಪ, ಹನುಮಂತರಾಯ ಹಾಗು ಲಕ್ಷ್ಮಿ ಅವರ ಮೇಲೆ ಎಫ್ಐಆರ್ ದಾಖಿಸಲು ಸೂಚಿಸಿದರು.

ಇದರ ಕುರಿತು ಮಾತನಾಡಿದ ಕುಮಾರಸ್ವಾಮಿ ಅವರು ನಮ್ಮ ಸರ್ಕಾರದಲ್ಲಿ ಯಾವುದೇ ರೀತಿಯ ಅಕ್ರಮ ವ್ಯವಹಾರಗಳಿಗೆ ಅವಕಾಶ ನೀಡುವುದಿಲ್ಲ. ಆರೋಪಿ ಎಂತಹ ದೊಡ್ಡ ವ್ಯಕ್ತಿಯಾಗಿದ್ದರು, ಅವರ ಮೇಲೆ ಸೂಕ್ತ ತನಿಖೆ ನಡೆಸಿ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

Leave a Reply