ಬಿಜೆಪಿ ನಡೆಯುತ್ತಿರುವ ಹಾದಿಗೆ ಬೇಸತ್ತ ಶಾಸಕ ನಿರಂಜನ್ ಕುಮಾರ್ ಜೆಡಿಎಸ್ ಗೆ ಬರುತ್ತಾರಾ!??

ಚಾಮರಾಜನಗರದ ಗುಂದಲುಪೇಟೆ ತಾಲೂಕಿನ ಶಾಸಕ ಸಿಏಸ್ ನಿರಂಜನ್ ಕುಮಾರ್ ಅವರು ಬಿಜೆಪಿ ತೊರೆದು ಜೆಡಿಎಸ್ ಗೆ ಸೇರುವ ಮುಂಸೂಚನೆ ನೀಡಿದ್ದಾರೆ.

ಮೈಸೂರು ಬಿಜೆಪಿ ಶಾಸಕರು ಮೈಸೂರು ದಸರಾ ಬಹಿಷ್ಕರಿಸಿದ್ದರೂ ನಿರಂಜನ್ ಕುಮಾರ್ ಅವರು ಮಾತ್ರ ಭಾಗಿಯಾಗುತ್ತಿದ್ದಾರೆ. ಮೈಸೂರು  ಮಾನ್ಯ  ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭಾಗಿಯಾಗುತ್ತಿರುವ ಬಹತೇಕ ಸಮಾರಂಭಗಳಲ್ಲಿ ನಿರಂಜನ್ ಕುಮಾರ್ ಅವರು ಭಾಗಿಯಾಗುತ್ತಿದ್ದಾರೆ.

ಅಲ್ಲದೆ ನಿರಂಜನ್ ಕುಮಾರ್ ಅವರಿಗೆ ಬಿಜೆಪಿಯಾ ತತ್ವಗಳು ಹಾಗು ನಡೆಯುತ್ತಿರುವ ಹಾದಿ ಬಗ್ಗೆ ಬೇಸರವಿದೆ ಎಂದು ಕೇಳಿಬರುತ್ತಿದೆ.

ಹೀಗಾಗಿ ಅವರು ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್ ಗೆ ಬರಬಹುದು ಎಂಬ ಮಾತುಗಳು ಆಪ್ತ ಮೂಲಗಳಿಂದ ಕೇಳಿಬರುತ್ತಿವೆ.

 

Leave a Reply