ಬೆಂಗಳೂರು ಟ್ರಾಫಿಕ್ ಗೋಳಿಗೆ ಫುಲ್ ಸ್ಟಾಪ್ ಇಡಲು ಸಿಎಂ ಕುಮಾರಸ್ವಾಮಿ ಮಾಸ್ಟರ್ ಪ್ಲಾನ್ 

ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಿಎಂ ಕುಮಾರಸ್ವಾಮಿ ಅವರು, ಈಗ ಬೆಂಗಳೂರಿನ ಟ್ರಾಫಿಕ್ ದಟ್ಟಣವನ್ನು ತಗ್ಗಿಸಲು ಮಾಸ್ಟರ್ಪ್ಲಾನ್ ಮಾಡಿದ್ದಾರೆ. ಬೆಂಗಳೂರು ಬೃಹದಾಕಾರವಾಗಿ ಬೆಳೆಯುತ್ತಿರುವಂತೆಯೇ ಅದರೊಂದಿಗೆ ಸಂಚಾರ ದಟ್ಟಣೆ ಸಮಸ್ಯೆಯೂ ಹೆಚ್ಚುವಂತಾಗಿದೆ. ಖಾಸಗಿ ಸಂಸ್ಥೆಯ ಸರ್ವೆ ಪ್ರಕಾರ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಗಂಟೆಗೆ 13 ಕಿ.ಮೀ. ವೇಗದಲ್ಲಿ ವಾಹನ ಸಂಚರಿಸುವ ಪರಿಸ್ಥಿತಿಯಿದೆ. ಇದು ನಗರದಲ್ಲಿನ ಸಂಚಾರ ದಟ್ಟಣೆ ಸಮಸ್ಯೆಗೆ ಹಿಡಿದ ಕನ್ನಡಿ.  ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಇನ್ನೊಂದು ತಿಂಗಳೊಳಗಾಗಿ ಪೆರಿಫೆರಲ್ ರಿಂಗ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ಹಿಂದೂಸ್ತಾನ್ ಟೈಮ್ಸ್ ಏರ್ಪಡಿಸಿದ್ದ ಲೀಡರ್​ಶಿಪ್ ಸಂವಾದದಲ್ಲಿ ಮಾತನಾಡಿ, ನಮ್ಮ ಮೆಟ್ರೋ ಕಾಮಗಾರಿ ನಿಗದಿತ ಕಾಲಮಿತಿ ಯಲ್ಲಿ ಪೂರ್ಣಗೊಳ್ಳಲಿದೆ. ಇದೊಂದರಿಂದಲೇ ಸಂಚಾರ ದಟ್ಟಣೆ ಪರಿಹಾರ ಸಾಧ್ಯವಿಲ್ಲ. ಇದನ್ನರಿತು ಸರ್ಕಾರ ಎಲಿವೇಟೆಡ್ ಕಾರಿಡಾರ್ ನಿರ್ವಿುಸಲು ಉದ್ದೇಶಿಸಿದೆ.
ಪಾಸ್ವಾನ್ ಭೇಟಿ: ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಭೇಟಿ ಮಾಡಿದ ಸಿಎಂ, ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ರಾಜ್ಯಕ್ಕೆ 1127 ಕೋಟಿ ರೂ. ಅನುದಾನ ಬಾಕಿ ಇದೆ. ಇದಕ್ಕೆ ಬೇಕಾದ ದಾಖಲೆಗಳನ್ನೂ ಸಲ್ಲಿಸಿದ್ದೇವೆ. ಶೀಘ್ರದಲ್ಲಿ ಹಣ ಬಿಡುಗಡೆ ಮಾಡಿ ಸಹಕರಿಸಬೇಕು ಎಂದು ವಿನಂತಿಸಿಕೊಂಡರು.

Leave a Reply