ಪತ್ರಕರ್ತರಿಗೆ ಕಷ್ಟಕ್ಕೆ ನೆರವಾದ ಸಿಎಂ ಕುಮಾರಸ್ವಾಮಿ

ಮಾಧ್ಯಮ ಸಮಾಜದ ಒಂದು ಅವಿಭಾಜ್ಯ ಅಂಗ ಅನ್ನುವುದಕ್ಕಿಂತ ಸಮಾಜದ ಕನ್ನಡಿ ಎಂದೇ ಹೇಳಬಹುದು. ಸಮಾಜದ ಮುಖ್ಯ ಸ್ತಂಭವಗಿರುವ ಮಾದ್ಯಮಕ್ಕೆ ಪತ್ರಕರ್ತರು ಬಹುಮಖ್ಯ. ಇದನ್ನು ಅರಿತ ಮಾನ್ಯ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಪತ್ರಕರ್ತರಿಗೆ ನೆರವಾಗುವಂತಹ ಯೋಜನೆಗಳನ್ನು ಜಾರಿಗೆ ತರಲಿದ್ದಾರೆ.

ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ “ಬ್ರಾಂಡ್ ಮಂಗಳೂರು” ಯೋಜನೆ ಹಾಗೂ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.
ಪತ್ರಕರ್ತರಿಗೆ ನಿವೇಶನ, ಬಸ್ ಪಾಸ್, ಅಧ್ಯಯನ ಪ್ರವಾಸ, ಕುಟುಂಬ ಪ್ರವಾಸ, ಆರೋಗ್ಯ ವಿಮೆ, ಪಿಂಚಣಿ ಒದಗಿಸುವುದು ಸರಕಾರಕ್ಕೆ ದೊಡ್ಡ ವಿಷಯವಲ್ಲ. ಈ ಬಗ್ಗೆ ಪತ್ರಕರ್ತರ ಸಂಘ ಸಲ್ಲಿಸಿರುವ ಮನವಿ ಪರಿಗಣಿಸಿ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ಹೀಗಂತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Leave a Reply