ಶಿವಮೊಗ್ಗದಲ್ಲೂ ಹಿಡಿತ ಕಳೆದುಕೊಳ್ಳುತ್ತಿದೆಯಾ ಬಿಜೆಪಿ?

ಬಿಜೆಪಿ ಮುಖ್ಯಸ್ಥ ಬಿ.ಎಸ್ ಯೆಡಿಯೂರಪ್ಪ ಇಷ್ಟು ವರುಷಗಳ ಕಾಲ ಶಿವಮೊಗ್ಗದಲ್ಲಿ ಗೆಲ್ಲುತ್ತಾ ಬಂದಿದ್ದರೂ, ನಿಧಾನವಾಗಿ ಅವರ ನಿಜ ಬಣ್ಣವನ್ನು ಜನ ತಿಳಿದುಕೊಂಡಿದ್ದಾರೆ. ಇಷ್ಟು ಬಾರಿ ಗೆದಿದ್ದರು ಶಿವಮೊಗ್ಗದಲ್ಲಿ ಹೇಳಿಕೊಂಡ ಮಟ್ಟಿಗೆ ಅಭಿವೃದ್ಧಿ ಮಾಡದಿರುವ ಬಿಜೆಪಿ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿದೆ.
 ಆದ್ದರಿಂದ  ಬಲಿಷ್ಠ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷವನ್ನು ಎದುರಿಸುವುದು ಬಿಜೆಪಿಗೆ ತಲೆ ನೊವ್ವಾಗಿದೆ.
ಬಿಜೆಪಿ ಪರ ಯಡಿಯೂರಪ್ಪನವರ ಮಗ ಬಿ.ವೈ ರಾಘವೇಂದ್ರ ಅವರು ಸ್ಪರ್ಧಿಸಲಿದ್ದಾರೆ. ಆದರೆ ಶಿವಮೊಗ್ಗ ಜನರ ಬಳಿ  ರಾಘವೇಂದ್ರ ಯಡಿಯೂರಪ್ಪನವರ ಮಗ ಎಂಬುದಾಗಿ ಹೊರೆತು ಸ್ವಂತವಾಗಿ ತಮ್ಮ ಜನ ಸೇವೆಯಿಂದ ಗುರುತಿಸಿಕೊಂಡಿಲ್ಲ.
ಇತ್ತ ಕಾಂಗ್ರೆಸ್ – ಜೆಡಿಎಸ್ ನ ಪರ ಬಡವರ ನೇತಾರ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪನವರು ಕಣ್ಣಕಿಳಿಯಲಿದ್ದಾರೆ. ತಂದೆಯಂತೆ ಮಗನು ಕೂಡ ಜನ ಮೆಚ್ಚಿದ ನಾಯಕನೇ ಹೌದು. ತಮ್ಮ ಜನಪರ ಕಾಳಜಿಯ ಮೂಲಕ ಅಪಾರ ಜನಪ್ರಿಯತೆಯನ್ನು ಗಳಿಸಿದ್ದಾರೆ.
ಆದ್ದರಿಂದ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಪಕ್ಷಕ್ಕೆ ಶಿವಮೊಗ್ಗದಲ್ಲಿ ಈ ಬಾರಿ ಗೆಲುವು ಖಚಿತವಾಗಿದೆ.

Leave a Reply