ಚುನಾವಣೆಗೂ ಮುನ್ನ ಸೋಲೊಪ್ಪಿಕೊಂಡರಾ ಬಿಎಸ್ ವೈ ?

ನವೆಂಬರ್ 3 ರಂದು ನಡೆಯಲಿರುವ  ರಾಜ್ಯದ 3 ಲೋಕಸಭೆ ಮತ್ತು 2 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಾ ಹಿನ್ನಲೆಯಲ್ಲಿ ಯಡಿಯೂರಪ್ಪನವರು ಸೋಲಿನ ಭೀತಿಯಿಂದ ಖಿನ್ನತೆಗೆ ಒಳಗಾಗಿರುವಂತೆ ಕಾಣುತ್ತಿದೆ.

ಬಿ.ಎಸ್​. ಯಡಿಯೂರಪ್ಪ ಅವರ ರಾಜೀನಾಮೆಯಿಂದ ತೆರವಾಗಿದ್ದ ಶಿವಮೊಗ್ಗ, ಶಾಸಕ ಶ್ರೀರಾಮುಲು ರಾಜೀನಾಮೆಯಿಂದ ತೆರವಾಗಿದ್ದ ಬಳ್ಳಾರಿ ಮತ್ತು ಸಚಿವ ಸಿ.ಎಸ್​. ಪುಟ್ಟರಾಜು ಅವರ ರಾಜೀನಾಮೆಯಿಂದ ತೆರವಾಗಿದ್ದ ಮಂಡ್ಯ ಲೋಕಸಭೆ ಕ್ಷೇತ್ರಗಳಿಗೆ ನವೆಂಬರ್​ 3 ರಂದು ಉಪಚುನಾವಣೆ ನಡೆಯಲಿದೆ.

ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿದ್ದ ರಾಮನಗರ ವಿಧಾನಸಭೆ ಕ್ಷೇತ್ರ ಮತ್ತು ದಿವಂಗತ ಸಿದ್ದು ನಾಮಗೌಡ ಅವರ ನಿಧನದಿಂದ ತೆರವಾಗಿದ್ದ ಜಮಖಂಡಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯೂ  ನವೆಂಬರ್​ 3 ರಂದು ನಡೆಯಲಿದೆ.

ಇದೆ ಹಿನ್ನಲ್ಲೆಯಲ್ಲಿ ಪತ್ರಕರ್ತರು, ಉಪಚುನಾವಣೆಗೆ ಬಿಜೆಪಿಯಾ ತಯಾರಿಕೆ ಬಗ್ಗೆ ಕೇಳಿದಾಗ, ಈ ಉಪಚುನಾವಣೆ, 2019ರ ಚುನಾವಣೆಯ ದಿಕ್ಸೂಚಿಯಲ್ಲಿ ಎಂದು ಹೇಳಿದ್ದಾರೆ.

ಕುಣಿಯಲಾಗದವನು ನೆಲ ಡೊಂಕು ಎಂದಂತೆ, ಕಾಂಗ್ರೆಸ್- ಜೆಡಿಎಸ್ ಮೈತ್ರಿ ಪಕ್ಷದ ಎದುರು ಸೋಲು ಖಚಿತವೆಂದು ಅರಿತಿರುವ ಯಡಿಯೂರಪ್ಪನವರು ಹೀಗೆ ಉತ್ತರಿಸಿದ್ದಾರೆ.

 

Leave a Reply