ಕುಮಾರಸ್ವಾಮಿ ಅವರ ಸರಳತೆ ಬಗ್ಗೆ ಕೇಳಿದರೆ ಆಶ್ಚರ್ಯ ಪಡುತ್ತೀರಾ!

ಇಂದು ಎಚ್.ಡಿ ಕುಮಾರಸ್ವಾಮಿ ಅವರು ಮಡಿಕೇರಿಯಲ್ಲಿ ಪ್ರಕೃತಿ ವಿಕೋಪದ ಸಂತ್ರಸ್ತರೊಂದಿಗೆ ಸಂವಾದ ಕಾರ್ಯಕ್ರಮ, ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಹಾಗು ತಲಕಾವೇರಿಯಲ್ಲಿ ತುಲಾ ಸಂಕ್ರಮಣ ತೀರ್ಥೋದ್ಭವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.

ಆದರೆ ಕೊಡಗು ಜನರಿಗೆ ಝಿರೋ ಟ್ರಾಫಿಕ್ ಮೂಲಕ ಸಮಸ್ಯೆ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸಂವಾದದಲ್ಲಿ ತಿಳಿಸಿದರು. ಇಂದು ಕೊಡಗಿನಲ್ಲಿ ಝಿರೋ ಟ್ರಾಫಿಕ್ ಬಳಕೆ ಮಾಡುವುದಿಲ್ಲ. ತಲಕಾವೇರಿಗೆ ಹೋಗುವಾಗಲೂ ಬಳಸುವುದಿಲ್ಲ ಎಂದು ತಿಳಿಸಿದರು. ಇದೇ ಕಾರ್ಯಕ್ರಮದಲ್ಲಿ ಸಿಎಂ ಎಚ್ಡಿಕೆ 30 ಮಂದಿಗೆ ಸಾಂಕೇತಿಕವಾಗಿ 50 ಸಾವಿರಗಳ ಪರಿಹಾರದ ಚೆಕ್​ ವಿತರಿಸಿದರು.

ಕೇವಲ ತಮ್ಮ ಸೌಕರ್ಯವನ್ನು ಯೋಚಿಸುವ ಸ್ವಾರ್ಥ ರಾಜಕಾರಣಿಗಳು ಅಧಿಕಾರದ ದರ್ಪದಿಂದ ಇಂತ ಸೌಲಭ್ಯಗಳನ್ನು ದುರುಪಯೋಗ ಪಡೆಸಿಕೊಳ್ಳುತ್ತಾರೆ. ಆದರೆ ಜನರ ಸೌಕರ್ಯಕ್ಕೆ ಮೊದಲ ಆಧ್ಯತೆ ನೀಡುವ ಕುಮಾರಸ್ವಾಮಿ ಅವರಂತ ಜನಪರ ನಾಯಕ ನಮಗೆ ದೊರಕಿರುವುದು ನಮ್ಮ ಪುಣ್ಯ.

Leave a Reply