‘ ದಿ ವಿಲನ್ ‘ ಸಿನಿಮಾದ ವಿರುದ್ಧ ಅ.18 ರಂದು ಪ್ರತಿಭಟನ್ನೆ…!?

ಕನ್ನಡದ ಬಹು ನಿರೀಕ್ಷಿತ ಸಿನಿಮಾ ‘ ದಿ ವಿಲನ್ ‘ ಚಿತ್ರ ಇನ್ನೇನು ರಿಲೀಸ್ ಆಗಬೇಕು ಎನ್ನುವಷ್ಟರಲ್ಲಿ ವಿವಾಧಕ್ಕೆ ಗುರಿಯಾಗಿದೆ.

ದಿ ವಿಲನ್‌ ಸಿನಿಮಾದಲ್ಲಿರುವ ‘ಗರುಡ್ನಂಗೆ ಇದ್ದೋನ್‌ ನೋಡ್ಲಾ ಕುರುಡ್ನಂಗ್‌ ಆಗೋದ್ನೋ ಪದ ತೆಗೆದು ಹಾಕದಿದ್ದಲ್ಲಿ ಅ.18ರಂದು ಚಿತ್ರಮಂದಿರದ ಮುಂದೆ ಪ್ರತಿಭಟನೆ ನಡೆಸುವುದಾಗಿ ದೃಷ್ಟಿ ವಿಶೇಷಚೇತನ ಸಮುದಾಯ ಎಚ್ಚರಿಕೆ ನೀಡಿದೆ.

ಕನ್ನಡದ ಬಹು ನಿರೀಕ್ಷಿತ ‘ದಿ ವಿಲನ್‌’ ಚಿತ್ರದ ಬೋಲೋ ಬೋಲೋ ಹಾಡಿನಲ್ಲಿ ‘ಗರುಡ್ನಂಗೆ ಇದ್ದೋನ್‌ ನೋಡ್ಲಾ ಕುರುಡ್ನಂಗ್‌ ಆಗೋದ್ನೋ’ ಎಂಬ ಸಾಲನ್ನು ತೆಗೆದು ಹಾಕಬೇಕು ಹಾಗೂ ಚಲನಚಿತ್ರಗಳಲ್ಲಿ ಅಂಧತ್ವವನ್ನು ಹೀನಾಯವಾಗಿ ಬಿಂಬಿಸುವುದನ್ನು ನಿಲ್ಲಿಸಬೇಕು ಎಂದು ದೃಷ್ಟಿ ವಿಶೇಷಚೇತನ ಸಮುದಾಯದ ಪ್ರತಿನಿಧಿ ಎಂ. ವೀರೇಶ್‌ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು. ನಮ್ಮ ಕೋರಿಕೆಗೆ ಸೂಕ್ತ ಪ್ರತಿಕ್ರಿಯೆ ಸಿಗದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ.

ವಿಕಲಚೇತನರ ಕಾಯಿದೆ ಯಾವುದೇ ವಿಕಲಚೇತನರ ನ್ಯೂನ್ಯತೆಯನ್ನು ಎತ್ತಿ ಹಿಡಿಯಬಾರದು ಎಂದು ತಿಳಿಸುತ್ತದೆ. ಅಲ್ಲದೆ, ದೃಷ್ಟಿವಿಶೇಷಚೇತನರ ಭಾವನೆಗಳಿಗೆ ಧಕ್ಕೆ ಉಂಟಾದಲ್ಲಿ ಅದಕ್ಕೆ ಕಾರಣರಾದವರ ಬಗ್ಗೆ ಕಾನೂನಾತ್ಮಕ ಕ್ರಮವನ್ನು ಕೈಗೊಳ್ಳಲು ಸಾಧ್ಯತೆ ಇದೆಯೆಂದು ಎಚ್ಚರಿಸಿದರು.

Leave a Reply