ದಸರಾ ಹೊಸ್ತಿಲಲ್ಲಿ ಉಪನ್ಯಾಸಕರಿಗೆ ಭರ್ಜರಿ ಬಹುಮಾನ ನೀಡಿದ ಎಚ್.ಡಿ.ಕೆ

ರಾಜ್ಯ ಸರ್ಕಾರ ಇದೀಗ ಸರಕಾರಿ ಅನುದಾನಿತ ಪ್ರೌಢಶಾಲಾ ಶಿಕ್ಷಕರು ಮತ್ತು ಪದವಿ ಪೂರ್ವ ಕಾಲೇಜುಗಳ  ಉಪನ್ಯಾಸಕರು ಮತ್ತು ಪ್ರಾಂಶುಪಾಲರಿಗೆ ಗುಡ್‌ ನ್ಯೂಸ್‌ ಕೊಟ್ಟಿದೆ.

ಅದೆಂದರೆ 2016ರ ಜೂನ್‌ 1ರಿಂದ ಜಾರಿಗೆ ಬರುವಂತೆ ಮಾಡಿದ್ದ ಒಂದು ಹೆಚ್ಚುವರಿ ವಿಶೇಷ ವೇತನ ಬಡ್ತಿಯನ್ನು ಮೂಲ ವೇತನದೊಂದಿಗೆ ವಿಲಯನಗೊಳಿಸಿ ನ.1ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ.

2016ರ ಜೂನ್‌ 1ರಿಂದ ಜಾರಿಗೆ ಬರುವಂತೆ ಮಂಜೂರು ಮಾಡಲಾಗಿದ್ದ ಹೆಚ್ಚುವರಿ ವೇತನ ಬಡ್ತಿಯನ್ನು ಆರನೇ ವೇತನ ಆಯೋಗವನ್ನು ಜಾರಿ ಮಾಡುವ ವೇಳೆ ಪರ್ಸನಲ್‌ ಪೇ ಎಂದು ಪ್ರತ್ಯೇಕಿಸಲಾಗಿತ್ತು. ಸರಕಾರದ ಈ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕತವಾಗಿತ್ತು.

ಈಗ ಕುಮಾರಸ್ವಾಮಿ ಅವರ ಸರಕಾರದಾಲ್ಲಿ ಶಿಕ್ಷಕರು ಮತ್ತು ಉಪನ್ಯಾಸಕರ ಬೇಡಿಕೆಗೆ ಮಣಿದು ರಾಜ್ಯೋತ್ಸದ ಕೊಡುಗೆ ಎಂಬಂತೆ ಈಗ ಹೆಚ್ಚುವರಿ ವಿಶೇಷತನ ವೇತನ ಬಡ್ಡಿಯನ್ನು ಮೂಲ ವೇತನದೊಂದಿಗೆ ವಿಲಯನಗೊಳಿಸುವ ಆದೇಶವನ್ನು ಹೊರಡಿಸಿತು.

 

Leave a Reply