ಜೆಡಿಎಸ್‌ ಉಸ್ತುವಾರಿಗಳ ನೇಮಕ

ಐದು ಕ್ಷೇತ್ರಗಳ ಉಪ ಚುನಾವಣೆಗೆ ಜೆಡಿಎಸ್‌ನಿಂದ ಉಸ್ತುವಾರಿಗಳನ್ನು ನೇಮಿಸಲಾಗಿದ್ದು, ಶಿವಮೊಗ್ಗ ಕ್ಷೇತ್ರಕ್ಕೆ ಬಿ.ಎಂ.ಫ‌ರೂಕ್‌, ವೈ.ಎಸ್‌.ವಿ.ದತ್ತಾ, ಮಂಡ್ಯ ಕ್ಷೇತ್ರಕ್ಕೆ ಶ್ರೀಕಂಠೇಗೌಡ, ರಾಮನಗರಕ್ಕೆ ಪಿ.ಜಿ.ಆರ್‌.ಸಿಂಧ್ಯಾ ಅವರಿಗೆ ಹೊಣೆಗಾರಿಕೆ ನೀಡಲಾಗಿದೆ.

ಬಳ್ಳಾರಿ ಕ್ಷೇತ್ರಕ್ಕೆ ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ, ಶಾಸಕ ರಾಜಾ ವೆಂಕಟಪ್ಪ ನಾಯಕ, ಜಮಖಂಡಿ ಕ್ಷೇತ್ರಕ್ಕೆ ಮಾಜಿ ಶಾಸಕರಾದ ಕೋನರೆಡ್ಡಿ, ಎಚ್‌.ಎಸ್‌.ಶಿವಶಂಕರ್‌ ಅವರನ್ನು ಉಸ್ತುವಾರಿಗಳಾಗಿ ನೇಮಿಸಲಾಗಿದೆ.

ರಾಮನಗರ ಕ್ಷೇತ್ರಕ್ಕೆ ಸಿಂಧ್ಯಾ ನೇತೃತ್ವದ ತಂಡದಲ್ಲಿ ಮಾಜಿ ಶಾಸಕ ಸಿ.ಬಿ.ಸುರೇಶ್‌ಬಾಬು, ಪರಿಷತ್‌ ಸದಸ್ಯ ಬೋಜೇಗೌಡ, ಶಾಸಕ ಗೋಪಾಲಯ್ಯ, ಬೆಂಗಳೂರು ನಗರ ಅಧ್ಯಕ್ಷ ಆರ್‌. ಪ್ರಕಾಶ್‌ ಸದಸ್ಯರಾಗಿದ್ದಾರೆ.

ಮಂಡ್ಯ ಕ್ಷೇತ್ರಕ್ಕೆ ಶ್ರೀಕಂಠೇಗೌಡರ ನೇತೃತ್ವದ ತಂಡದಲ್ಲಿ ಪರಿಷತ್‌ ಸದಸ್ಯ ಅಪ್ಪಾಜಿ ಗೌಡ, ಕೆ.ವಿ.ನಾರಾಯಣಸ್ವಾಮಿ, ಶರವಣ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್‌ ಸದಸ್ಯರಾಗಿದ್ದಾರೆ. ಶಿವಮೊಗ್ಗ ಕ್ಷೇತ್ರಕ್ಕೆ  ಬಿ.ಎಂ.ಫ‌ರೂಕ್‌ ತಂಡದಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಪ್ಪ, ಪರಿಷತ್‌ ಸದಸ್ಯ ಕಾಂತರಾಜು, ಮಾಜಿ ಶಾಸಕ ಕೋನರೆಡ್ಡಿ ಸದಸ್ಯರಾಗಿದ್ದಾರೆ.

Leave a Reply