ಇದನ್ನು ಓದಿದರೆ ಮುಂದಿನ ಚುನಾವಣೆಯಲ್ಲಿ ನೀವು ಮೋದಿಗೆ ಮತ ಹಾಕುವುದಿಲ್ಲ

ಕಳೆದ ಬಾರಿ 2014 ರಲ್ಲಿ ದೇಶದೆಲ್ಲಡೆ ಸಂಚಲನ ಮೂಡಿಸಿ, ಭಾರತದ ಜನತೆಯ ಮುಖದಲ್ಲಿ ಹೊಸ ಆಕಾಂಕ್ಷೆಗಳನ್ನು ಮೂಡಿಸಿ ಬೃಹತ್ ಗೆಲುವನ್ನು ನರೇಂದ್ರ ಮೋದಿ ಸಾಧಿಸಿದರು.
ಆದರೆ ಕಾಲ ಕಳೆದಂತೆ, ಆಶ್ವಾಸನೆಗಳು ಕೇವಲ ಭಾಷಣ ವಿಡಿಯೋಗಳಲ್ಲೇ ಉಳಿದುಕೊಂಡಿತು.
ನನಗೆ ಕೇವಲ 60 ತಿಂಗಳು ಕೊಡಿ, ನಿಮ್ಮ ಕನಸಿನ ರಾಷ್ಟ್ರ ಕಟ್ಟಿಕೊಡುತ್ತೇನೆ ಎಂದವರು, ಈಗ ವಿದೇಶ ಪ್ರವಾಸಗಳಲ್ಲಿ ಮಜಾ ಮಾಡುತ್ತಾ , ಅದರ ಗುಂಗಲ್ಲೇ ತಲ್ಲೀನರಾಗಿ ಹೋಗಿದ್ದಾರೆ.
ಸ್ವಿಸ್ ಬ್ಯಾಂಕ್ ನಲ್ಲಿ ಇರುವ ಕಪ್ಪು ಹಣವನ್ನು ಹಿಂತಿರುಗಿ ಬರುವಂತೆ ಮಾಡುತ್ತೇನೆ ಎಂದವರು, ಪೊಳ್ಳು ಭಾಷಣಗಳನ್ನು ಮಾಡುವುದರಿಂದ ಇಂದಿನವರೆಗೂ ಹಿಂತಿರುಗಿ ನೋಡೇ ಇಲ್ಲ.
ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ ವರ್ಗಾವಣೆ ಮಾಡುತ್ತೇನೆ ಎಂದು ಕೂಡ ಹೇಳಿದ್ದವರು ಇವರೇ ಅಲ್ಲವೇ, ಪಾಪ ಮರೆತಿರಬೇಕು ಬಿಡಿ.
 ‘ಸಬ್ಕ ಸಾಥ್ ಸಬ್ಕ ವಿಕಾಸ್’ ಎಂದು ಹೇಳಿದ ಇವರು, ಇಂದನವರೆಗೂ ಬಿಜೆಪಿ ಇಂದ ಒಬ್ಬ ಯೋಗ್ಯ ಮುಸ್ಲಿಂ ಅಭ್ಯರ್ಥಿಯನ್ನು ಹುಡುಕಲು ಸಾಧ್ಯವಾಗಿಲ್ಲ.
ಈಗ ತೈಲದ ಬೆಲೆ ಏರಿಕೆ, ದಿನ ನಿತ್ಯ ಬಳಕೆಯ ದವಸ ಧಾನ್ಯಗಳ ದರವನ್ನು ಗಗನಕ್ಕೇರಿಸಿ ದೇಶದ ಜನತೆ ಪರದಾಡುವಂತೆ ಮಾಡಿದ್ದಾರೆ.
ಇನ್ನು 2ಜಿ ಸ್ಕ್ಯಾಮ್, ರಫೆಲ್ ಒಪ್ಪಂದದಂತಹ ಹಲವಾರು ಸ್ಕ್ಯಾಮ್ ಗಳಲ್ಲಿ ಮೋದಿ ಅವರು ಸಿಕ್ಕಿಬಿದಿದ್ದಾರೆ.
ಡಾಲರ್ ಎದುರು ರೂಪಾಯಿ ಮೌಲ್ಯ ಕಂಡು ಕೇಳರಿಯದಷ್ಟು ಕುಸಿದಿದೆ.
ಮೋದಿ ಕೈಯಲ್ಲಿ ಅಧಿಕಾರ ಕೊಟ್ಟಿರುವುದು, ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತಾಗಿದೆ.
ಹೀಗೆ ತಮ್ಮ ನರ ನಾಡಿಗಳಲ್ಲೂ ಸುಳ್ಳು, ಮೋಸ, ಕಪಟತನವನ್ನು ತುಂಬಿಕೊಂಡಿರುವ ಮೋದಿ ಅವರ ಪೊಳ್ಳು ಆಶ್ವಾಸನೆಗಳನ್ನು ಪಟ್ಟಿ ಮಾಡುವುದಕ್ಕೆ ಹಾಳೆಗಳು ಸಾಲುವುದಿಲ್ಲ.
ಈಗ ಮುಂದಿನ ಚುನಾವಣೆಯಲ್ಲಿ ಮೋದಿಗೆ  ಮತ ಹಾಕಬೇಕೋ ಇಲ್ಲವೋ ಎಂಬುದನ್ನು ನೀವೇ ನಿರ್ಧರಿಸಿ.

Leave a Reply