ಹೆಬ್ಬುಲಿ ನಾಯಕಿಯಿಂದ ನಿರ್ದೇಶಕನ ವಿರುದ್ಧ #metoo !!

ಚಿತ್ರಂಗದಲ್ಲಿ ಮೀ ಟೂ ಆರೋಪ ಮುಂದುವರಿದಿದ್ದು, ದಿನಕ್ಕೊಂದರಂತೆ ನಟ, ನಿರ್ದೇಶಕರ ಮೇಲೆ ಆರೋಪಗಳು ವರದಿಯಾಗುತ್ತಿವೆ. ಇದಕ್ಕೆ ಹೊಸ ಸಾಕ್ಷಿ ಎಂಬಂತೆ ಹೆಬ್ಬುಲಿ ಚಿತ್ರದ ನಾಯಕಿಯಾಗಿದ್ದ ಅಮಲಾ ಪೌಲ್‌ ಅವರು ತಮಿಳು  ನಿರ್ದೇಶಕ ಸುಸಿ ಗಣೇಶನ್‌ ವಿರುದ್ಧ ಆರೋಪ ಮಾಡಿದ್ದಾರೆ.

ತಿರುಟು ಪಾಯಲೆ-2 ಚಿತ್ರದ ಚಿತ್ರೀಕರಣದ ವೇಳೆ ಸುಸಿ ಗಣೇಶನ್‌ ಅವರು ನನಗೆ ಲೈಂಗಿಕ ಕಿರುಕುಳ ನೀಡಿದ್ದರು. ಆಫ‌ರ್‌ಗಳನ್ನು ನೀಡಿದ್ದರು ಎಂದು ಆರೋಪಿಸಿದ್ದಾರೆ.

ಸುಸಿ ಗಣೇಶನ್‌ ವಿರುದ್ದ ಲೇಖಕಿ ಲೀನಾ ಮನಿ ಮೆಕ್ಕಾಲೈ ಅವರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಲೀನಾ ಅವರ ಬೆಂಬಲಕ್ಕೆ  ಅಮಲಾ ಅವರು ನಿಂತಿದ್ದರು. ಮಾತ್ರವಲ್ಲದೆ ನಿಮ್ಮ ಧೈರ್ಯವನ್ನು ಮೆಚ್ಚುತ್ತೇನೆ ಎಂದಿದ್ದರು.

ಲೀನಾ ಅವರನ್ನು ಬೆಂಬಲಿಸಿದ್ದಕ್ಕೆ  ಸುಸಿ ಗಣೇಶನ್‌ ಅವರು ಅವಾಚ್ಯ ಶಬ್ಧಗಳಿಂದ ನಿಂದಿಸಿ  ನನಗೆ ಬೆದರಿಕೆ ಹಾಕಿದ್ದಾರೆ ಎಂದು ಅಮಲಾ ಹೇಳಿಕೊಂಡಿದ್ದಾರೆ.

26 ರ ಹರೆಯದ ಅಮಲಾ ಪೌಲ್‌ ಅವರು ಮಲಯಾಳಂ ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿರಿಸಿದ್ದರು. ತೆಲುಗು, ತಮಿಳು ಮತ್ತು ಕನ್ನಡದ 20 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಚತುರ್ಭಾಷಾ ತಾರೆ ಎನಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್‌ ಅಭಿನಯದ ಹೆಬ್ಬುಲಿ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು.

 

Leave a Reply