ಜೈಲು ಪಾಲಾದ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್ ನವೀನ್

ತನ್ನ ಎಲೆಯಲ್ಲಿ ಹೆಗ್ಗಣ್ಣ ಬಿದ್ದಿದ್ದರು  ಬೇರೆಯವರ ಎಲೆಯಲ್ಲಿ ನೊಣ ಹುಡುಕುವವರೇ ಹೆಚ್ಚು. ಇದೆ ರೀತಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್ ನವೀನ್ ಗೆ ಈಗ ಜೈಲಿನಲ್ಲಿ ಮುದ್ದೆ ಮುರಿಯುವ ಪರಿಸ್ಥಿತಿ ಎದುರಾಗಿದೆ.
ಕೆ.ಎಸ್ ನವೀನ್ ಅವರು ಕೆಲವು ವಾರಗಳ ಹಿಂದೆ ಮುಖ್ಯಮಂತ್ರಿ ಕೂಲಿಮಾರ್ಸ್ವಾಮಿ ಅವರಒಂದು ಹೇಳಿಕೆಯನ್ನು ತಿರುಚಿ ಅವರ ಮುಖಕ್ಕೆ ಮಸಿ ಬಳಿಯಲು ಅವರ ವಿರುದ್ಧ ಚಳುವಳಿ ಮಾಡಿದ್ದರು. ಆದರೆ ಈಗ ಅವರೇ ಜೈಲಿನ ಅತಿಥಿ ಆಗಿದ್ದರೆ.
ಕಾರ್ಮಿಕ ರಾಜ್ಯ ವಿಮಾ ನಿಗಮಕ್ಕೆ ಹಣ ಕಟ್ಟದೆ ವಂಚನೆ ಮಾಡಿರುವ ಆರೋಪ  ಚಿತ್ರದುರ್ಗ ಪ್ರಧಾನ ಜೆಂಎಂಎಫ್ ಸಿ ನ್ಯಾಯಾಲಯದಲ್ಲಿ ಸಾಬೀತಾಗಿದ್ದು 10 ಸಾವಿರ ರೂ. ದಂಡ ಮತ್ತು 1 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.
2012-13 ನೇ ಸಾಲಿನಲ್ಲಿ 1,54,440 ರೂ. ಹಣ ಕಟ್ಟದೆ ವಂಚನೆ ಮಾಡಿರುವ ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಸರ್ಕಾರಿ ಅಭಿಯೋಜಕ ಪಿ.ಪಿ.ತಿಪ್ಪೇಸ್ವಾಮಿರಿಂದ ಸರ್ಕಾರ ಪರ ವಾದ ಮಂಡನೆ ಮಾಡಿದ್ದರು. ಕಾರ್ಮಿಕ ವಿಮಾ ನಿಗಮ ಚಿತ್ರದುರ್ಗ ವಿಭಾಗ ಪ್ರಕರಣ ದಾಖಲಿಸಿತ್ತು.

Leave a Reply