ಮಾಧ್ಯಮಗಳ ವಿರುದ್ಧ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನೆಡೆಸಿರುವ ವಿಡಿಯೋ ಈಗ ವೈರಲ್ !!

ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ತೀವ್ರ ಇಂಧನ ಕೊರತೆ ಇದ್ದು, ಇದರ ಬಗ್ಗೆ ಸತತ ಮನವಿ ಮಾಡಿದರು, ಕೇಂದ್ರ ಸರ್ಕಾರ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಇದೆ ಕಾರಣದಿಂದ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಆಗುವ ಸಾಧ್ಯತೆ ಇತ್ತು. ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅನಾರೋಗ್ಯದಿಂದ ಅಸ್ವಸ್ಥರಾಗಿದ್ದರು, ಈ ಕಠಿಣ ಪರಿಸ್ಥಿತಯನ್ನು ಸೂಕ್ತವಾಗಿ ನಿಭಾಯಿಸಿ ಎಲ್ಲೂ ಲೋಡ್ ಶೆಡ್ಡಿಂಗ್ ಆಗದಂತೆ ನೋಡಿಕೊಂಡಿದ್ದಾರೆ.
ಆದರೆ ಟಿ.ಆರ್.ಪಿ ದಾಹ ಇರುವ ಕೆಲ ಮಾಧ್ಯಮಗಳು, ಮುಖ್ಯಮಂತ್ರಿ ಮುಖಕ್ಕೆ ಮಸಿ ಬಳಿಯಲು, ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಇದ್ದರು ರಾಜ್ಯದ ಹಲವು ಪ್ರದೇಶಗಳಲ್ಲಿ ಲೋಡ್ ಶೆಡ್ಡಿಂಗ್ ಆಗಿದೆ ಎಂದು ಪ್ರಸಾರ ಮಾಡಿದ್ದರು.
ಇದರಿಂದ ಮನನೊಂದ ಸಿಎಂ ಎಚ್ ಡಿಕೆ ‘ ನಾವು ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಮಾಡುವ ಸಾಧ್ಯತೆ ಇಲ್ಲ. ನನ್ನ ಅನುಮತಿ ಇಲ್ಲದೆ ಹೇಗೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತದೆ? ಈ ವಿಷಯ ತಿಳಿದು ನನಗೆ ಆಶ್ಚರ್ಯವಾಯಿತು. ನೀವು ಯಾವುದೇ ವಿಷಯ ಪ್ರಸಾರ ಮಾಡುವ ಮುನ್ನ ಒಂದಷ್ಟು ಕಡೆ ವಿಚಾರಿಸಿ ಸ್ಪಷ್ಟ ಮಾಡಿಕೊಳ್ಳಿ. ಸರ್ಕಾರ ತಪ್ಪು ಮಾಡಿದಾಗ ತೇಜೋವದೆ ಮಾಡುವುದರಲ್ಲಿ ತಪ್ಪಿಲ್ಲ. ಆದರೆ ನಿಮ್ಮ ಬೇಳೆ ಬೇಯಿಸಿಕೊಳ್ಲಲು, ರಾಜ್ಯದ ಜನತೆಗೆ ನಮ್ಮ ಸರ್ಕಾರದ ಮೇಲೆ ಕೆಟ್ಟ ಭಾವನೆ ಬರುವಂತೆ ಮಾಡಬೇಡಿ. ‘ಎಂದು ಮಾಧ್ಯಮಗಳಿಗೆ  ಖಡಕ್ ಎಚ್ಚರಿಕೆ ನೀಡಿದರು .

Leave a Reply