ನಾನು ಅರ್ಜುನ್ ಸರ್ಜಾ ತರ ತಪ್ಪು ಮಾಡುವುದಿಲ್ಲ – ಒಳ್ಳೆ ಹುಡುಗ ಪ್ರಥಮ್ ಶಾಕಿಂಗ್ ಹೇಳಿಕೆ

#metoo ಅಭಿಯಾನದಡಿ ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಅವರ ಮೇಲೆ ಮಾಡಿರುವ ಆರೋಪ ಈಗ ಇಡೀ ದಕ್ಷಿಣ ಭಾರತದಲ್ಲೇ ಕಾಡ್ಗಿಚ್ಚಿನಂತೆ ಹರಡುತ್ತಿದೆ. ತಮಿಳಿನ ‘ವಿಸ್ಮಯ’ ಚಿತ್ರದ ಚಿತ್ರೀಕರಣದ ರಿಹರ್ಸಲ್ ವೇಳೆ ಅರ್ಜುನ್ ಸರ್ಜಾ ಉದ್ದೇಶಪರ್ವಕವಾಗಿ ನನ್ನ ಬೆನ್ನು ಮುಟ್ಟಿದರು ಎಂದು ಶ್ರುತಿ ಆರೋಪಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಅರ್ಜುನ್ ಸರ್ಜಾ ಮಾನನಷ್ಟ ಮೊಕ್ಕದ್ದಮೆ ಆರೋಪ ಹೊರೆಸಿ 5 ಕೋಟಿ ರೂ. ಪರಿಹಾರವಾಗಿ ಕೊಡಲು ಬೇಡಿಕೆ ಒಡ್ಡಿದ್ದಾರೆ. 
ಭಾರತದ ಅತಿ ದೊಡ್ಡ ರಿಯಾಲಿಟಿ ಶೋ ನಲ್ಲಿ ಗೆದ್ದು, ತನ್ನ ವಿಲಕ್ಷಣ ಗುಣಗಳಿಂದ ಜನಗಳನ್ನು ಸೆಳೆದಿರುವ ಒಳ್ಳೆ ಹುಡುಗ ಪ್ರಥಮ್ ಶ್ರುತಿ ಹರಿಹರನ್ ಅವರ #metoo ವಿವಾಧದ ಬಗ್ಗೆ ಕೇಳಿದಾಗ “#metoo ಆಂಧೋಲನವನ್ನು ದುರಪಯೋಗ ಪಡಿಸಿಕೊಳ್ಳುತಿದ್ದಾರೆ. ಸಾಕ್ಷ್ಯಾಧಾರವಿಲ್ಲದೆ ಆರೋಪ ಮಾಡುವುದೇ ಅಪರಾಧ. ನನ್ನ ಮೇಲೆ ಇಂತ ಆರೋಪ ಬಂದಲ್ಲಿ, ನಾನು ಅರ್ಜುನ್ ಸರ್ಜಾ ಅವರಂತೆ ಸಹನಾ ಮೂರ್ತಿಯಂತೆ ಸುಮ್ಮನೆ ಇರುವುದಿಲ್ಲ. ಮೊದಲ ದಿನವೇ ಮಾನನಷ್ಟ ಮೊಕ್ಕದ್ದಮೆ ಹಾಕಿ 1 ಕೋಟಿ ರೂ. ಬೇಡಿಕೆ ಇಡುತ್ತೇನೆ.” ಎಂದು ಹೇಳಿದರು.  

Leave a Reply