ಸಿಎಂ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಜನರು ಹೇಗೆ ಪ್ರತಿಕ್ರಿಯಿಸಿದರು ನೋಡಿ

 ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಪಕ್ಷದ ಲೋಕಸಭಾ ಉಪಚುನಾವಣೆ ಪ್ರಚಾರ ಸಭೆ ಮುಗಿಸಿಕೊಂಡು ಪಟ್ಟಣದ ಮಾರ್ಗವಾಗಿ ಚನ್ನರಾಯಪಟ್ಟಣಕ್ಕೆ ಹೋಗುವ ವೇಳೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಪಕ್ಷದ ಕಾರ್ಯಕರ್ತರು ಸಂಭ್ರಮದಿಂದ ಬರಮಾಡಿಕೊಳ್ಳಲು ಮುಂದಾದರು.
ಆದರೆ ಸಿಎಂ ಕುಮಾರಸ್ವಾಮಿ ಅವರು ಬರುವ ವಿಷಯ ತಿಳಿದಿದ್ದ ಯುವಕರು, ಕುಮಾರಸ್ವಾಮಿ ಅವರನ್ನು ನೋಡುವ ಬಯಕೆಯಿಂದ ಅಲ್ಲೇ ಕಾದು ಕುಳಿತಿದ್ದರು. ಕುಮಾರಸ್ವಾಮಿ ಅವರು ಬಂದ ಕೂಡಲೇ ಯುವಕರು ಸೆಲ್ಫಿಗಾಗಿ ಮುಗಿಬಿದ್ದರು. 
ಯುವಕರು ಮುಖ್ಯಮಂತ್ರಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ವೇಳೆ ನೂಕುನುಗ್ಗಲು ಉಂಟಾಯಿತು. ಮುಖ್ಯಮಂತ್ರಿ ಪಟ್ಟಣಕ್ಕೆ ಆಗಮಿಸಿದೊಡನೆ ಯುವಕರ ದಂಡು ಸಿಎಂ ಕುಮಾರಸ್ವಾಮಿ ಅವರೊಂದಿಗೆ ಪೋಟೋಗಳನ್ನು ಕ್ಲಿಕ್ಕಿಸಿಕೊಂಡರು. ನಂತರ ಸೆಲ್ಫಿ ತೆಗೆದುಕೊಳ್ಳಲು ಸಿಎಂ ಇದ್ದ ಕಡೆ ನುಗ್ಗಿ ಹೋದರು. ಈ ವೇಳೆ ಮುಖ್ಯಮಂತ್ರಿಗಳು ಕಾರಿನಿಂದ ಇಳಿಯಲು ಹರಸಾಹಸ ಪಡುವಂತಾಯಿತು.ಕಾರ್ಯಕರ್ತರು ತಂದಿದ್ದ ಗುಲಾಬಿಯ ಪುಷ್ಪಮಾಲೆ ಹಾಕಲು ಅಡಚಣೆಯಾಯಿತು. ಎತ್ತ ನೋಡಿದರೂ ಸೆಲ್ಫಿ ಹಾವಳಿ ಹೆಚ್ಚಾಗಿತ್ತು.
ಕುಮಾರಸ್ವಾಮಿ ಅವರನ್ನು ಹೊರೆತು ಪಡಿಸಿ ಬೇರೆಯಾವ ರಾಜಕಾರಣಿಗೂ ಇಷ್ಟು ದೊಡ್ಡ ಅಭಿಮಾನಿ ಬಳಗ ಅಥವಾ ಜನರ ಪ್ರೀತಿ ದೊರಕಿಲ್ಲ. ಅದರಲ್ಲೂ ರಾಜಕೀಯದಲ್ಲಿ ಅಷ್ಟು ಆಸಕ್ತಿ ವಹಿಸದ ಯುವಕರನ್ನೂ ಸಹ ಸೆಳೆಯುವುದರಲ್ಲಿ ಕುಮಾರಸ್ವಾಮಿ ಅವರು ಸಫಲರಾಗಿದ್ದಾರೆ.  ಅವರು ಕರ್ನಾಟಕದ ಅಭಿವೃದ್ದಿಗಾಗಿ  ನಿರಂತರ  ಶ್ರಮಿಸುತ್ತಿರುವ ರೀತಿಯಿಂದ ಈ ಅಪಾರ ಪ್ರೀತಿ ಹಾಗು ಅಭಿಮಾನವನ್ನು ಗಳಿಸಿದ್ದಾರೆ.

Leave a Reply