ಪ್ರತಿಯೊಬ್ಬ ನಾಗರಿಕನಿಗೂ ಉಚಿತವಾಗಿ ಉಪ್ಪು ದೊರೆಯಬೇಕೆಂಬ ಉದ್ದೇಶದಿಂದ ರಾಷ್ಟ್ರಪಿತ ಗಾಂಧೀಜಿ ಅವರು ಉಪ್ಪಿನ ಸತ್ಯಾಗ್ರಹವನ್ನೇ ಮಾಡಿದ್ದರು. ಆದರೆ ಅದೇ ಗುಜರಾತ್ ನೆಲದಿಂದ ಬಂದ ಮೋದಿ ಮಾಡಿದ್ದೇನು? ಮೋದಿ ಆಡಳಿತದಲ್ಲಿ 1 ಕೆ.ಜಿ ಅಯೋಡಿನ್ ಯುಕ್ತ ಉಪ್ಪು 25 ರೂ. ಏರಿಕೆ ಕಾಣುವಂತ ಆಡಳಿತ ನೀಡಿ ಭಾರತದ ಪಾಲಿಗೆ ಗೋಡ್ಸೆ ಆಗಿದ್ದಾರೆ.
ಇನ್ನು ದೇಶದಲ್ಲಿ ರೈತರ ಸ್ಥಿತಿ ಹೀನಾಯ ಮಟ್ಟಕ್ಕೆ ತಲುಪಿದೆ. ಒಂದು ಚೀಲ ಪೊಟ್ಯಾಷ್ ಗೊಬ್ಬರದ ದರವನ್ನು 1,700 ರೂ. ಮಾಡಿ, ಬಡ ರೈತರ ರಕ್ತ ಹೀರುತ್ತಿದ್ದಾರೆ. ಕೀಟ ನಾಶಕಗಳ ಬೆಲೆಯೂ ಗಗನಕ್ಕೇರಿದೆ .
ಇಷ್ಟೆಲ್ಲ ಆಗುತ್ತಿದ್ದರು,ಇದರ ಬಗ್ಗೆ ಕನಿಷ್ಠ ಪಕ್ಷ ರೈತರಿಗೆ ಸಾಂತ್ವನ ಹೇಳಲು ಮೋದಿ ತಲೆ ಕೆಡಿಸಿಕೊಳ್ಳುತ್ತಿಲ್ಲ.
ಇವರ ಆಡಳಿತದಲ್ಲಿ ಸಂವಿಧಾನಿಕ ಸಂಸ್ಥೆ ಸಿಬಿಐಯನ್ನು ಹಾಳುಮಾಡುತಿದ್ದಾರೆ. ದೇಶದ ಸಮಸ್ಯೆಗಳ ಬಗ್ಗೆ ಉತ್ತರ ನೀಡುವ ಸಂದರ್ಭ ಬಂದಾಗ, ವಿದೇಶ ಪ್ರವಾಸಕ್ಕೆ ಹಾರಿಬಿಡುತ್ತಾರೆ.
ದೇಶದ ಬೆನ್ನೆಲುಬಾದ ರೈತ ಕುಟುಂಬಕ್ಕೆ ತಲೆ ನೋವಾಗಿರುವ ಮೋದಿ ನಾಯಕತ್ವದ ಬಿಜೆಪಿ ಪಕ್ಷಕ್ಕೆ ಮತ್ತೆ ಮತ ಹಾಕಬೇಕಾ?