#metoo : ರಶ್ಮಿಕಾ ಮಂದಣ್ಣ SHOCKING ಹೇಳಿಕೆ… !!!

ಭಾರತ ಚಿತ್ರರಂಗದಲ್ಲೇ  #metoo ಅಭಿಯಾನ ಸಂಚಲನ ಮೂಡಿಸಿದೆ. ಕೆಲವು ಸತ್ಯಗಳು ಹೊರಬಂದಂತೆ, ಆರೋಪಿಗಳ ಅಭಿಮಾನಿಗಳು ಬೆಚ್ಚು ಬಿದ್ದಿದ್ದಾರೆ. ತಮ್ಮ ನೆಚ್ಚಿನ ನಟ/ನಟಿ/ನಿರ್ದೇಶಕ/ಸಂಗೀತಗಾರ ನ ನಿಜ ಬಣ್ಣ ತಿಳಿದು ಬೇಸರವಾಗಿದ್ದರೆ.
ಈಗ ಇದರ ಬಗ್ಗೆ ಇತ್ತೀಚೆಗಷ್ಟೇ ರಕ್ಷಿತ್ ಶೆಟ್ಟಿ ಜೊತೆ ಬ್ರೇಕ್-ಅಪ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಲಿಗರ ಬಳಿಪಶು ಆಗಿದ್ದ ರಶ್ಮಿಕಾ ಮಂದಣ್ಣ ಸಂತಸ ವ್ಯಕ್ತ ಪಡಿಸಿದ್ದಾರೆ.

ಬೆಂಗಳೂರಿನ ಎಚ್‌ಎಸ್‌ಆರ್‌ ಬಡಾವಣೆಯ ಖಾಸಗಿ ಕಾರ‍್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀ ಟೂ ಅಭಿಯಾನದಿಂದಾಗಿಯೇ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಮೀ ಟೂ ಅಭಿಯಾನದಿಂದ ಎಲ್ಲರೂ ಅವರ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ಇದರಿಂದ ತುಂಬ ಖುಷಿ ಆಗುತ್ತಿದೆ ಎಂದು ತಿಳಿಸಿದರು.

ನಟ ಅರ್ಜುನ್‌ ಸರ್ಜಾ ಹಾಗೂ ನಟಿ ಶೃತಿ ಹರಿಹರನ್‌ ವಿವಾದದ ಬಗ್ಗೆ ಪ್ರಶ್ನಿಸಿದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಅರ್ಜುನ್‌ ಸರ್ಜಾ – ಶೃತಿ ಪ್ರಕರಣ ನಾನೇನು ಹೇಳಲಿ ಎಂದು ನುಣುಚಿಕೊಂಡರು.

Leave a Reply