ತೆಲುಗು ಚಿತ್ರಕ್ಕಾಗಿ ಕನ್ನಡ ಸಿನಿಮಾದಿಂದ ಹೊರ ಬಂದರಾ ರಶ್ಮಿಕ?

ರಷ್ಮಿಕ ಮಂದಣ್ಣ ಇತ್ತೀಚೆಗಷ್ಟೆ ರಕ್ಷಿತ್ ಶೆಟ್ಟಿ ಅವರ ಜೊತೆ ಒಂದು ವರ್ಷದ ಸಂಬಂಧಕ್ಕೆ ಫುಲ್ ಸ್ಟಾಪ್ ಇಟ್ಟು, ಟ್ರಾಲಿಗರ ಪಾಲಿಗೆ ಬಲಿ ಕುರಿ ಆಗಿದ್ದರು.

ಅದಲ್ಲದೆ ರಶ್ಮಿಕ ಮಂದಣ್ಣ ಟಾಲಿವುಡ್ ನಲ್ಲಿ ಅವಕಾಶ ಸಿಕ್ಕೊಡನೆ ಕನ್ನಡವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಗಾಂಧಿನಗರದ ಗಲ್ಲಿಗಳಲ್ಲಿ ಸದ್ದಾಗತೊಡಗಿತು. ಈ ಬೆಂಕಿಗೆ ತುಪ್ಪ ಸುರಿದಂತೆ, ರಶ್ಮಿಕ ತಮ್ಮ ಚಿತ್ರದ ಆಡಿಯೋ ಲಾಂಚ್ ಒಂದರಲ್ಲಿ ತೆಲುಗಿನಲ್ಲಿ ಮಾತನಾಡಿದರು. ‘ ಇಷ್ಟು ವರುಷ ಕರುನಡಿನಲ್ಲಿ ಬೆಳೆದ ಅವರಿಗೆ ಇನ್ನೂ ಸರಿಯಾಗಿ ಕನ್ನಡ ಕಲಿಯಲು ಸಾಧ್ಯವಾಗಿಲ್ಲ. ಆದರೆ ಇಷ್ಟು ಕಡಿಮೆ ಅವಧಿಯಲ್ಲಿ ತೆಲುಗು ಕಲಿತಿದ್ದಾರೆ ‘ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಈಗ ರಶ್ಮಿಕ ಅವರು ಒಪ್ಪಕೊಂಡ ಕನ್ನಡ ಚಿತ್ರದಿಂದ ಹೊರಬಂದು ಮತ್ತೆ ಸುದ್ದಿಯಾಗಿದ್ದಾರೆ.ಗೌತಮ್ ಅಯ್ಯರ್ ನಿರ್ದೇಶನದ ‘ ವೃತ್ತ ಚಿತ್ರಕ್ಕೆ ಸಹಿ ಹಾಕಿದ್ದರು. ಈ ಚಿತ್ರಕ್ಕೆ ಫೋಟೋಶೂಟ್ ಕೂಡ ಮಾಡಿಸಿದ್ದರು. ಆದರೆ ಈಗ ಈ ಚಿತ್ರದಿಂದ ಹೊರಬಂದಿದ್ದಾರೆ. ರಶ್ಮಿಕ ಅವರು ಈ ಚಿತ್ರದಿಂದ ಹೊರಬರಲು ತೆಲುಗಿನ ಸಿನಿಮಾ ಎಂಬ ಮಾತುಗಳು ರೆಕ್ಕೆ ಪುಕ್ಕ ಕಟ್ಟಿಕೊಂಡು ಸಂದಲ್ವುಡ್ ನಲ್ಲಿ ಹರಿದಾಡುತ್ತಿದೆ.

Leave a Reply