ಚೇತನ್ ನನ್ನ ಮೈ ಮುಟ್ಟಿ, ಡಿನ್ನರ್ ಗೆ ಕರೆದಿದ್ದರು : #metoo ಪ್ರಕರಣದಲ್ಲಿ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಷಾಕಿಂಗ್ ಹೇಳಿಕೆ

ಅರ್ಜುನ್ ಸರ್ಜಾ ಅವರ ಮೇಲೆ #ಮೇಟೂ ಅಭಿಯಾನದಡಿ ಲೈಂಗಿಕ ದೌರ್ಜನ್ಯದ ಆರೋಪ ಹೊರಸಿರುವ ವಿಷಯ ಇಡೀ ಸೌತ್ ಚೀನಿ ದುನಿಯಾವನ್ನೇ ಬೆಚ್ಚಿ ಬೀಳಿಸಿದೆ. ಚಿತ್ರರಂಗದಲ್ಲಿ 30 ಕ್ಕೂ ಹೆಚ್ಚು ವರುಷದಿಂದ ಶ್ರಮಿಸಿ, ಜೆಂಟಲ್ ಮ್ಯಾನ್ ಎಂಬ ಬಿರುದು ಪಡೆದಿದ್ದ ಅರ್ಜುನ್ ಸರ್ಜಾ ಅವರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಅವರ ಅಭಿಮಾನಿಗಳಿಗೆ ಹಾಗು ಚಿತ್ರರಂಗದ ಸಧಸ್ಯರಿಗೆ ನಂಬಲು ಅಸಾಧ್ಯವೆನಿಸುತ್ತಿದೆ.
ಈ ಪ್ರಕರಣದ ಬಗ್ಗೆ ಅವರ ಇಡೀ ಕುಟುಂಬ ಬೇಸರ ಹಾಗು ಆವೇಶ ವ್ಯಕ್ತ ಪಡಿಸುತ್ತಿದೆ. ಶ್ರುತಿ ಬೆಂಗಾವಲಾಗಿ ನಿಂತಿರುವ ಫೈರ್ ಸಂಸ್ಥೆಯ ಸ್ಥಾಪಕ ನಟ ಚೇತನ್ ವೈಯ್ಯುಕ್ತಿಕ ದ್ವೇಷದಿಂದ ಈ ಕೆಲಸ ಶ್ರುತಿ ಅವರ ಕಯ್ಯಲ್ಲಿ ಮಾಡಿಸುತ್ತಿದ್ದಾರೆ ಎಂಬ ಮಾತುಗಳು ಚಿತ್ರರಂಗದಲ್ಲಿ ಕೇಳಿಬರುತ್ತಿವೆ.
ಇದೆ ಹಿನ್ನಲೆಯಲ್ಲಿ ಮಾತನಾಡಿದ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯ ಸರ್ಜಾ, ನಟ ಚೇತನ್ ಅವರ ವಿರುದ್ಧ ಕಿಡಿ ಕಾರಿದ್ದಾರೆ. ನಟ ಚೇತನ್​ ತಮ್ಮ ಜತೆ ಖಾಸಗಿಯಾಗಿ ನಡೆದುಕೊಂಡ ಬಗೆಯನ್ನು ವಿವರಿಸಿದ ಅವರು ನಟ ಚೇತನ್​ ಕೂಡ ನನ್ನ ಮೈ ಮುಟ್ಟಿದ್ದಾರೆ. ಪ್ರೇಮ ಬರಹ ಫೋಟೋ ಶೂಟ್ ವೇಳೆ ನನ್ನ ಕೆನ್ನೆ ಸವರಿದರು. ಕುತ್ತಿಗೆ ಮುಟ್ಟಿದರು ಅದನ್ನೆಲ್ಲ ಲೈಂಗಿಕ ದೌರ್ಜನ್ಯ ಅನ್ನೋಕಾಗೋತ್ತಾ? ಡಿನ್ನರ್​ಗೆ ಕೂಡ ಕರೆದಿದ್ದರು. ಆ ಬಗ್ಗೆ ದೂರು ನೀಡಲು ಆಗುತ್ತದೆಯಾ? ಎಂದು ಪ್ರಶ್ನಿಸಿದ್ದಾರೆ.
ನಾವು ದೂರು ನೀಡಿರುವುದರಿಂದ ಪ್ರತಿ ದೂರು ನೀಡಿದ್ದಾರೆ. ಘಟನೆ ನಡೆದು 2 ವರ್ಷಗಳಾದರೂ ಏಕೆ ಸುಮ್ಮನಿದ್ದರು? ಶ್ರುತಿ ಹಿಂದೆ ಯಾರೋ ಇದ್ದಾರೆ. ಅವರು ಹೇಳಿಕೊಟ್ಟಂತೆ ಇವರು ಮಾತನಾಡುತ್ತಿದ್ದಾರೆ ಎಂದು ಹೇಳಿ ಶ್ರುತಿಯ ಆರೋಪವನ್ನು ತಳ್ಳಿ ಹಾಕಿದ್ದಾರೆ.

Leave a Reply