ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿದ್ದೀರಾ ಎಂದ ಯಡಿಯೂರಪ್ಪನಿಗೆ ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ ?

ಆಡಳಿತದಲ್ಲಿ ಲೋಪದೋಷ ಸಿಗುತ್ತಿಲ್ಲ ಎಂದು ಅಧಿಕಾರಕ್ಕಾಗಿ ತಿರುಕನ ಕನಸು ಕಾಣುತ್ತಿರುವ ಯಡಿಯೂರಪ್ಪ, ಕುಮಾರಸ್ವಾಮಿ ಅವರು ಅಧಿಕಾರದ ಆಸೆಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಯಡಿಯೂರಪ್ಪನವರ ಬಂಡವಾಳ ಬಿಚ್ಚಿಟ್ಟರು.
ಒಂದು ಸಮಯದಲ್ಲಿ ಅಧಿಕಾರಕ್ಕಾಗಿ ಯಡಿಯೂರಪ್ಪ ದೇವೇಗೌಡರ ಮನೆಗೆ ಬಂದಿದ್ರು. ವಿಧಾನಸೌಧದಲ್ಲಿ 10 ನಿಮಿಷ ಮಾತಾಡಬೇಕು ಟೈಮ್‌ ಕೊಡಿ ಅಂತ ಚೀಟಿ ಕಳುಹಿಸಿದ್ರು. ಡಿಸಿಎಂ ಅಲ್ಲ ಸಚಿವ ಸ್ಥಾನ ಕೊಡಿ, ಬಿಜೆಪಿ ಬಿಟ್ಟು ಬರುವೆ ಅಂತ ಇವರೇ ಹೇಳಿದ್ದರು ಇದನ್ನೆಲ್ಲ ನೆನಪಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಮೈತ್ರಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿಯವರು ಇಂದು ಅಥವಾ ನಾಳೆ ಸರಕಾರ ಉರುಳುತ್ತೆ ಎಂದು ಹೇಳುತ್ತಲೇ
ಬಂದಿದ್ದಾರೆ. ಈಗ ದೀಪಾವಳಿಗೆ ಸರ್ಕಾರ ಬೀಳುತ್ತದೆ ಎನ್ನಲು ಶುರು ಮಾಡಿದ್ದಾರೆ. ಇದನ್ನೆಲ್ಲ ಹೇಳಲು ಬಿಜೆಪಿಯವರು ಜ್ಯೋತಿಷಿಗಳಾ ಎಂದು ಕುಮಾರಸ್ವಾಮಿ ಟಾಂಗ್‌ ನೀಡಿದರು. ರಾಹು, ಕೇತುಗಳ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಹಿಂದೆ ನಿಮ್ಮ ನಿಮ್ಮಲ್ಲಿಯೇ ಕೆಸರೆರಚಾಟ ಮಾಡಿಕೊಂಡ್ರಲ್ಲಾ ಅದು ಏನು? ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ಸಿದ್ದರಾಮಯ್ಯರನ್ನು ಜೈಲಿಗೆ ಕಳುಹಿಸುತ್ತೀನಿ ಅಂತ ಹೇಳಿದ್ದ ನಿಮಗೆ ಈಗ ಸಿದ್ದರಾಮಯ್ಯನವರ ಬಗ್ಗೆ ಅನುಕಂಪ ಬಂತಾ? ಬಿಎಸ್‌ವೈ ಅವರು ತಮ್ಮ ವಿರುದ್ಧದ ಹಗರಣಗಳನ್ನೆಲ್ಲ ಮುಚ್ಚಿ ಹಾಕಿಕೊಳ್ಳಲು ಏನೇನು ಮಾಡಿದ್ರು ಅನ್ನೋದು ನನಗೆ ಗೊತ್ತು ಎಂದು ಹೇಳಿದರು.
ಹೀಗೆ ಕೆಸರಿನ ಮೇಲೆ ಕಲ್ಲು ಎರಚುವುದು ಬೇಡ ಎಂದುಕೊಂಡು ಇಷ್ಟು ದಿನ ಶಾಂತವಾಗಿದ್ದ ಎಚ್ ಡಿಕೆ, ಯಡಿಯೂರಪ್ಪನವರು ಮಾಡಿದ ಹಾಗು ಮಾಡುತ್ತಿರುವ ಚೀಪ್ ಗಿಮಿಕ್ ಗಳ ಬಗ್ಗೆ ತಿಳಿಸಿದರು. 
ಅಲ್ಲದೆ, ವರ್ಗಾವಣೆ ದಂಧೆ ಮಾಡುತ್ತಿದ್ದಾರೆ ಎಂಬ ಆರೋಪಕ್ಕೂ, ತಕ್ಕ ಉತ್ತರ ನೀಡಿದರು. ವರ್ಗಾವಣೆ ದಂಧೆ ಬಗ್ಗೆ ನನ್ನ ವಿರುದ್ಧ ಆರೋಪ ಮಾಡ್ತಿದ್ದೀರಿ. ವರ್ಗಾವಣೆಯಲ್ಲಿ ಹಣ ಮಾಡಿದ್ದೇವೆ ಅಂತಿರಲ್ಲ. ಈಶ್ವರಪ್ಪ ಕುಟುಂಬದವರಿಗೆ ವರ್ಗಾವಣೆ ಮಾಡಿದ್ದಕ್ಕೆ ಎಷ್ಟು ಕೊಟ್ಟರು ಅಂತ ಅವರೇ ಹೇಳಬೇಕು ಎಂದು ಶಿವಮೊಗ್ಗದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಹೇಳಿದರು.
ಹೀಗೆ ಕುಮಾರಸ್ವಾಮಿ ಅವರು ಯಡಿಯೂರಪ್ಪನ ನೈತಿಕತೆ ಬಗ್ಗೆ ಮಾಧ್ಯಮಗಳ ಮುಂದೆ ತೆರೆದಿಟ್ಟರು.

Leave a Reply