ಬಿಜೆಪಿ ಅಭ್ಯರ್ಥಿಯಾಗಿ ರಾಘವೇಂದ್ರನನ್ನು ಯಾಕಾದರೂ ಆಯ್ಕೆ ಮಾಡಿದೆ ಎಂದು ಚಿಂತಿಸುತಿದ್ದಾರ ಯಡಿಯೂರಪ್ಪ?

ಯಡಿಯೂರಪ್ಪನವರ ಮಗ ಬಿ.ವೈ ರಾಘವೇಂದ್ರ ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಅವರ ಎದುರಾಳಿಯಾಗಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಕೂಟದಿಂದ ಬಡವರ ಬಂಧು, ಶಿವಮೊಗ್ಗದ ಚಿನ್ನ, ಎಸ್. ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪನವರು ಕಣಕ್ಕಿಳಿಯಲಿದ್ದಾರೆ. ಮಧು ಬಂಗಾರಪ್ಪನವರು ಈಗಾಗಲೇ ಶಿವಮೊಗ್ಗದ ಜನರ ಮನಸ್ಸನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗಿದ್ದಾರೆ.

ಇಂದಿಗೂ ಕರ್ನಾಟಕದ ಪ್ರತಿಯೊಬ್ಬ ನಾಗರಿಕನು ‘ ಬಂಗಾರಪ್ಪ ನಂತಹ ಮುಖ್ಯಮಂತ್ರಿ ಮತ್ತೊಮ್ಮೆ ಬರುವುದಿಲ್ಲ’ ಎಂದು ಹೇಳುತ್ತಾರೆ. ಕೇವಲ ಒಂದು ಕ್ಷೇತ್ರದ ಜನಾಭಿಮಾನ ಗಳಿಸುವುದಕ್ಕೆ ರಾಜಕಾರಣಿಗಳು ಹರಸಾಹಸ ಪಡುವಾಗ, ಬಂಗಾರಪ್ಪನವರು ಇಡೀ ರಾಜ್ಯದ ಜನರ ಪ್ರೀತಿ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ಅವರ ಪುತ್ರ ಮಧು ಬಂಗಾರಪ್ಪನವರು ಕೂಡ ತಮ್ಮ ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾರೆ.

ಅವರ ತಂದೆಯಂತೆಯೇ ಮಧು ಬಂಗಾರಪ್ಪನವರು ಸಹ ಬಡವರ ನಾಯಕನಾಗಿದ್ದಾರೆ. ಇತ್ತ ತನ್ನ ಸ್ವ ಕ್ಷೇತ್ರದಲ್ಲೇ ಸ್ಪರ್ಧಿಸುವ ಸಾಮರ್ಥ್ಯವಿಲ್ಲದ, ಅಕ್ರಮ ಆಸ್ತಿ ಗಳಿಸಿ, ಜೈಲು ಪಾಲಾದ ಯಡಿಯೂರಪ್ಪನ ಮಗ ಬಿ.ವೈ ರಾಘವೇಂದ್ರನನ್ನು ಶಿವಮೊಗ್ಗದ ಜನತೆ ಗುರಿತಿಸಲು ಸಹ ಕಷ್ಟ ಪಡುತಿದ್ದು, ಸೋಲಿನ ಭೀತಿಯಲ್ಲಿ ಕಂಗಾಲಾಗಿದ್ದಾರೆ. ಇಷ್ಟು ವರುಷ ಶಿವಮೊಗ್ಗ ತನ್ನ ಭದ್ರಕೋಟೆ ಎಂದು ಮೆರೆಯುತ್ತಿದ್ದ ಬಿಜೆಪಿ ಪಕ್ಷದ ಅಧ್ಯಕ್ಷ ಯಡಿಯೂರಪ್ಪನೇ ಈಗ ತನ್ನ ಮಗನನ್ನು ಯಾಕಾದರೂ ಆಯ್ಕೆ ಮಾಡಿದೆ ಎಂದು ಚಿಂತಿಸುವಂತಹ ಪರಿಸ್ಥಿತಿ ಎದುರಾಗಿದೆ.

Leave a Reply