ಸನ್ ರೈಸರ್ಸ್ ಗೆ ಗುಡ್ ಬಾಯ್ ಹೇಳಿದ ಗಬ್ಬರ್ ಸಿಂಗ್…?

ಐಪಿಎಲ್‌ 2019ರಲ್ಲಿ ಶಿಖರ್‌ ಧವನ್‌ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಪರ ಆಡಲಿದ್ದಾರೆ. ಸನ್‌ರೈಸ​ರ್ಸ್ ಹೈದರಾಬಾದ್‌, ಧವನ್‌ರನ್ನು ಡೆಲ್ಲಿಗೆ ಮಾರಾಟ ಮಾಡಿ 3 ಆಟಗಾರರನ್ನು ಖರೀದಿಸಿದೆ.

ವಿಜಯ್‌ ಶಂಕರ್‌, ಅಭಿಷೇಕ್‌ ಶರ್ಮಾ ಹಾಗೂ ಶಾಬಾಜ್‌ ನದೀಮ್‌, ಡೆಲ್ಲಿಯಿಂದ ಸನ್‌ರೈಸರ್ಸ’ಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಕಳೆದ ಆವೃತ್ತಿಯಲ್ಲಿ ಸನ್‌ರೈಸ​ರ್ಸ್ ಧವನ್‌ರನ್ನು ಹರಾಜಿಗೂ ಮೊದಲು ಉಳಿಸಿಕೊಂಡಿರಲಿಲ್ಲ. ಹರಾಜಿನಲ್ಲಿ ‘ಆರ್‌ಟಿಎಂ’ ಕಾರ್ಡ್‌ ಬಳಸಿ 5.2 ಕೋಟಿ ರುಪಾಯಿಗೆ ಖರೀದಿಸಿತ್ತು. ಇದು ಧವನ್‌ ಅಸಮಾಧಾನಕ್ಕೆ ಕಾರಣವಾಗಿತ್ತು.

11 ವರ್ಷಗಳ ಬಳಿಕ ಧವನ್‌ ಡೆಲ್ಲಿಗೆ ವಾಪಸಾಗುತ್ತಿದ್ದಾರೆ. ಹೊಸದಾಗಿ ಖರೀದಿಸಿರುವ ಆಟಗಾರರ ಒಟ್ಟು ಮೊತ್ತ 6.95 ಕೋಟಿ ರುಪಾಯಿ ವ್ಯತ್ಯಾಸ ಬಂದಿರುವ ಮೊತ್ತವನ್ನು ಸನ್‌ರೈಸ​ರ್ಸ್ ಪಾವತಿಸಬೇಕಿದೆ.

Leave a Reply