ಮಂಡ್ಯದ ಉಪಚುನಾವಣೆಯಲ್ಲಿ ಸೋಲುವ ಭೀತಿಯಿಂದ ಮ್ಯಾಚ್ ಗೆ ಮುನ್ನವೇ ವಿನ್ ಡಿಕ್ಲೇರ್ ಕೊಟ್ಟರಾ ಬಿಜೆಪಿ ಅಭ್ಯರ್ಥಿ ?

ಲೋಕಸಭಾ ಉಪಚುನಾವಣೆಯ ಮಂಡ್ಯದ ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ ಅವರು ಕೈ ಕೊಟ್ಟಿದಾರೆ ಎಂಬ ಸ್ಪೋಟಕ ಮಾಹಿತಿ ಈಗ ಹೊರಬಂದಿದೆ. ಮಂಡ್ಯದಲ್ಲಿ ಫಲಿತಾಂಶದ ಮುನ್ನವೇ ಜೆಡಿಎಸ್ ಗೆಲುವು ಸಾಧಿಸುತ್ತದೆ ಎಂದು ಯಾರು ಬೇಕಾದರೂ ಸುಲಭವಾಗಿ ಹೇಳಬಹುದು. ಇದೆ ಭಯದಲ್ಲಿ ಅಖಾಡಕ್ಕೆ ಇಳಿಯುವ ಮುನ್ನವೇ, ಬಿಜೆಪಿ ಅಭ್ಯರ್ಥಿ ಕಣದಿಂದ ನಿವೃತ್ತರಾಗಿದ್ದಾರೆ ಎಂಬ ಮಾಹಿತಿ, ಈಗ ತಿಳಿದುಬಂದಿದೆ.

ಈಗಾಗಲೇ ಬಿಜೆಪಿಯ ರಾಮನಗರದ ಅಭ್ಯರ್ಥಿ ಎಲ್. ಚಂದ್ರಶೇಖರ್ ಚುನಾವಣೆಯಿಂದ ಹಿಂದೆ ಸರಿದು ಪಕ್ಷ ತೊರೆದಿದ್ದಾರೆ. ಆಮಿಷಗಳನ್ನು ಒಡ್ಡಿ ಪಕ್ಷಕ್ಕೆ ಸೆಳೆದಿದ್ದ ಅಭ್ಯರ್ಥಿಯೂ ಈಗ ಬಿಜೆಪಿ ನಾಯಕರ ನಡವಳಿಕೆಯಿಂದ ಬೇಸತ್ತು ಪಕ್ಷ ತೊರೆದಿದ್ದಾರೆ ಎಂಬ ವದಂತಿ ಆಪ್ತ ಮೂಲಗಳಿಂದ ತಿಳಿದುಬಂದಿದೆ.
ಇದನ್ನು ಚೇತರಿಸಿಕೊಳ್ಳುವಷ್ಟರಲ್ಲಿ, ಬಿಜೆಪಿಗೆ ಮತ್ತೊಂದು ಆಘಾತ ಎದುರಾಗಿದೆ. ಒಬ್ಬರಾದ ಮೇಲೆ ಮತ್ತೊಬರಂತೆ ಸೋಲಿನ ಭೀತಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಚುನಾವಣೆಯಿಂದ ನಿವೃತ್ತರಾಗುತ್ತಿದ್ದಾರೆ.

Leave a Reply