ಮಾವ ಅರ್ಜುನ್ ಸರ್ಜಾ ಆಯ್ತು ಈಗ  ಅಳಿಯ ಚಿರು ಮೇಲೂ #metoo ಬಾಂಬ್…!? 

ಸೌತ್ ಸಿನಿಮಾ ದುನಿಯಾದ ಹೆಸರಾಂತ ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಶ್ರುತ ಹರಿಹರನ್ #metoo ಅಭಿಯಾನದಡಿ ಲೈಂಗಿಕ ಆರೋಪ ಎಸಗಿದ್ದು, ಈ ಪ್ರಕರಣ ಈಗ ಕೋರ್ಟ್ ಮೆಟ್ಟಿಲೇರಿದೆ.
ಇದೆ ಹಿನ್ನಲೆಯಲ್ಲಿ, ಅವರ ಅಳಿಯ ನಟ ಚಿರಂಜೀವಿ ಸರ್ಜಾ ಅವರಿಗೂ #metoo ಬಿಸಿ ತಗಳುವಂತಿದೆ. ಕೆಲವು ದಿನಗಳ ಹಿಂದೆಯಷ್ಟೇ ಸಂಗೀತ ಭಟ್ ಅವರು ತಮ್ಮ ಫೇಸ್ಬುಕ್ ನಲ್ಲಿ, ಯಾರದೇ ಹೆಸರನ್ನು ಬಹರಂಗ ಪಡಿಸದೆ, ಚಿತ್ರರಂಗದಲ್ಲಿ ತಾವು ಅನುಭವಿಸಿದ ಲೈಂಗಿಕ ಶೋಷಣೆಯ ಬಗ್ಗೆ ಹಂಚಿಕೊಂಡಿದ್ದರು. ಇವರು ಕೇವಲ ಒಂದು ಘಟನೆ ಬಗ್ಗೆ ಅಲ್ಲದೆ, ತಮ್ಮ ಸಿನಿ ಪಣಯದ ಹೆಜ್ಜೆ ಹೆಜ್ಜೆಯಲ್ಲು ಅನುಭವಿಸಿದ್ದ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದರು.
ಅವರ ಅನುಭವಗಳ ಪಟ್ಟಿಯಲ್ಲಿ, 2017 ರಲ್ಲಿ ಒಂದು ತೆಲುಗಿನ ರಿಮೇಕ್ ಚಿತ್ರಕ್ಕೆ ಸಹಿ ಮಾಡಿದ್ದೆ. ನನಗೆ ಒಬ್ಬ ದೊಡ್ಡ ಕುಟುಂಬದ ನಟನ ಜೊತೆ ತೆರೆ ಹಂಚಿಕೊಳ್ಳಲು ಅವಕಾಶ ದೊರಕಿತ್ತು. ಈ ಚಿತ್ರದ ನಾಯಕ ‘ ನೀನು virgin ಆ? ‘ ಎಂದು ಕೇಳಿದ್ದರು. ಅಲ್ಲದೆ ಭೇಟಿ ಆಗಲು ಕೇಳಿ, ನನ್ನ ಜೊತೆ ಹಾಸಿಗೆ ಹಂಚಿಕೊ ಎಂದು ಕೇಳಿದ್ದರು. ಬಹುಷಃ ಇದು ಅವರ ಕುಟುಂಬದಲ್ಲಿ ರಕ್ತಗತವಾಗಿ ಬಂದಿರಬೇಕು ‘ ಎಂದು ಹೆಸರು ಬಹಿರಂಗ ಪಡಿಸದೆ ಬರೆದುಕೊಂಡಿದ್ದರು.
ಈಗ ಅದನ್ನು ತಮ್ಮದೇ ಲೆಕ್ಕಾಚಾರದಲ್ಲಿ ಫೈರ್ ಸಂಸ್ಥೆಯ ಅಮೃತ ಕಾರ್ಯಕರ್ತೆ ಅಮೃತ ಸಂಗೀತ ಹೇಳುತ್ತಿರುವ ನಟ ಚಿರಂಜೀವಿ ಸರ್ಜಾ ಎಂದು ಊಹಿಸುತ್ತಿದ್ದಾರೆ.
ಇದಕ್ಕೆ ಅವರು ನೀಡುತ್ತಿರುವ ಸಮರ್ಥನೆ ಹೀಗಿದೆ  – ಸಂಗೀತ ಕೆಲವೇ ಕೆಲವು ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೆ ಅವರು ಸಹಿ ಮಾಡಿದ್ದ ಏಕೈಕ ರಿಮೇಕ್ ಚಿತ್ರ, ತೆಲುಗಿನ ‘ಕ್ಷಣಂ’ ಚಿತ್ರದ್ದು. ಈ ಚಿತ್ರವನ್ನು ಕೆ.ಎಂ ಚೈತನ್ಯ ಅವರು ನಿರ್ದೇಶಿಸಬೇಕಿದ್ದು, ಇದರ ಚಿತ್ರದ ನಾಯಕನಾಗಿ ಆಯ್ಕೆಯಾಗಿದ್ದು ಚಿರಂಜೀವಿ ಸರ್ಜಾ.
2017 ರಲ್ಲಿ ಈ ಚಿತ್ರ ಸೆಟ್ ಏರಿದ್ದು, ಕಾರಣಾಂತರಗಳಿಂದ, ನಿಂತು ಹೋಯಿತು. ಈ ಚಿತ್ರವನ್ನು ಕೆ.ಎಂ ಚೈತನ್ಯ ಅವರು ನಿರ್ದೇಶಿಸಬೇಕಿತ್ತು.

Leave a Reply