ಆರ್ ಸಿಬಿ ಪಾಲಾಗುತ್ತಾನಾ ಕೆರಿಬಿಯನ್ ದೈತ್ಯ ಅಂದ್ರೆ ರಸ್ಸಲ್ ?

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಆಟಗಾರ ಅಂದ್ರೆ ರಸ್ಸಲ್ ನನ್ನು  ಈ ಬಾರಿ  ಆರ್ ಸಿಬಿ ಟ್ರೇಡ್ ಮಾಡಿಕೊಳ್ಳಲಾಗಿದೆ ಎಂಬ ವದಂತಿಗಳು ಕೇಳಿಬರುತ್ತಿವೆ. ಆದರೆ ಯಾವ ಆಟಗಾರ ಕೆಕೆಆರ್ ತಂಡಕ್ಕೆ ಬೆಂಗಳೂರು ತಂಡದಿಂದ ಕಳುಹಿಸಲಾಗುತ್ತದೆ ಎಂದು ಇನ್ನು ತಿಳಿದುಬಂದಿಲ್ಲ.
ತಂಡದಲ್ಲಿ ಒಬ್ಬ ವಿಂಡೀಸ್ ಆಟಗಾರನಿದ್ದರೆ, ಗೆಲುವಿನ ಸರಾಸರಿ ಜಿಗಿಯುವುದರಲ್ಲಿ ಸಂದೇಹವಿಲ್ಲ. ಇದಕ್ಕೆ ಸಾಕ್ಷಿಯಂತೆ, ಅತಿ ಹೆಚ್ಚು ಬಾರಿ ಐಪಿಎಲ್ ಟ್ರೋಫಿಯನ್ನು ಗೆದ್ದಿರುವ ಸಿಎಸ್ ಕೆ, ಮುಂಬೈ ಇಂಡಿಯನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಗೆಲುವಿನಲ್ಲ ವಿಂಡೀಸ್ ಆಟಗಾರರ ಕೊಡುಗೆ ಅಪಾರ. ಸತತ 10 ಆವೃತ್ತಿಯಿಂದ ಗೆಲುವಿಗಾಗಿ  ಮುಕ್ಕರಿಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯಾದರು ಗೆಲುವಿನ ನಗು ಬೀರುತ್ತಾರೆ ಕಾದು ನೋಡಬೇಕು.

Leave a Reply