ಬಿಜೆಪಿ, ಬಜರಂಗದಳ, ಆರ್ ಎಸ್ಎಸ್ ನವರೇ ನನಗೆ ಬೆಂಬಲಿಸುತ್ತಿದ್ದಾರೆ – ಮಧು ಬಂಗಾರಪ್ಪ ಶಾಕಿಂಗ್ ಹೇಳಿಕೆ

ಶಿವಮೊಗ್ಗದ ಲೋಕಸಭಾ ಉಪಚುನಾವಣೆ ನಾಳೆ(ನವೆಂಬರ್ 3) ನಡೆಯಲಿದೆ. ಇದೆ ಹಿನ್ನಲೆಯಲ್ಲಿ ಮಾತನಾಡಿರುವ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಮಧು ಬಂಗಾರಪ್ಪನವರು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಕರ್ನಾಟಕ ಕಂಡ ಅತ್ಯಂತ ವರ್ಣರಂಜಿತ ರಾಜಕಾರಣಿ, ಬಡವರ ಬಂಧು ಎಸ್ ಬಂಗಾರಪ್ಪನವರು ರಾಜ್ಯಕ್ಕೆ ನೀಡಿರುವ ಕೊಡುಗೆ ಅಪಾರ. ಇಂದಿಗೂ ರಾಜ್ಯದ ಜನತೆ ‘ ಬಂಗಾರಪ್ಪರವರಂತಹ ಮುಖ್ಯಮಂತ್ರಿ ಮತ್ತೆ ಬರುವುದಿಲ್ಲ’ ಎಂದು ಅವರ ಆಡಳಿತವನ್ನು ನೆನಪಿಸಿಕೊಳ್ಳುತ್ತಾರೆ. 
ಅವರ ಪುತ್ರರಾಗಿರುವ ಮಧು ಬಂಗಾರಪ್ಪನವರು ಸಹ ತಂದೆಯ ಹೆಜ್ಜೆ ಗುರುತನ್ನು ಹಿಂಬಾಲಿಸುತ್ತಿದ್ದಾರೆ. ತಂದೆಯ ಬಗ್ಗೆ ಮಾತನಾಡಿದ ಮಧು ಬಂಗಾರಪ್ಪನವರು ‘ ನಮ್ಮ ತಂದೆಯವರ ಅಭಿಮಾನಿಗಳು ಜೆಡಿಎಸ್, ಕಾಂಗ್ರೆಸ್ ಮಾತ್ರವಲ್ಲದೆ ಬಿಜೆಪಿಯಲ್ಲೂ ಇದ್ದಾರೆ. ‘ ನಾನು ಈ ಮಟ್ಟಕ್ಕೆ ಬರಬೇಕೆಂದರೆ, ಇಂದಿಗೂ ಕರಾವಳಿ ಭಾಗದ ಬಿಜೆಪಿ, ಆರ್ ಎಸ್ಎಸ್, ಬಂಜರಂಗದಳದ ನಾಯಕರು ನನ್ನ ಪರ ಕೆಲಸ ಮಾಡುತ್ತಿದ್ದಾರೆ. ಇದು ಕೇವಲ ನಮ್ಮ ತಂದೆಯವರ ಋಣ ತೀರುಸುವ ಸಲುವಾಗಿ ‘ ಎಂದು ಹೇಳಿದ್ದಾರೆ.
ಇವರ ಎದುರಾಳಿ ಬಿ.ವೈ ರಾಘವೇಂದ್ರ ಅವರನ್ನು ಶಿವಮೊಗ್ಗದ ಜನ ಗುರುತಿಸಲಾ ಸಹ ಕಷ್ಟ ಪಡುತ್ತಿದ್ದಾರೆ.
ಜನರ ಮನಸ್ಸನ್ನು ಗೆದ್ದಿರುವ ಮಧು ಬಂಗಾರಪ್ಪನವರು, ಬಿಜೆಪಿ ಭದ್ರಕೋಟೆಯಾಗಿರುವ ಶಿವಮೊಗ್ಗದಲ್ಲಿ ಈ ಬಾರಿ ಗೆಲುವಿನ ನಗು ಬೀರುವ ವಿಶ್ವಾಸದಲಿದ್ದಾರೆ.

Leave a Reply