ಜಮಖಂಡಿಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಬಿಜೆಪಿ ಕಾರ್ಯಕರ್ತರ ಬಂಧನ

ಜಮಖಂಡಿಯ ವಿಧಾನಸಭಾ ಉಪಚುನಾವಣೆಗೆ ಮತದಾನ ನೆಡೆಯುತಿರುವಂತೆ, ಬಿಜೆಪಿ ಕಾರ್ಯಕರ್ತರು ನೀತಿ ಸಂಹಿತಿ ಉಲ್ಲಂಘಿಸಿ ಸಿಕ್ಕಿಬಿದ್ದಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ಮತಗಟ್ಟೆಯ ನೂರು ಮೀ. ಪ್ರದೇಶವನ್ನು ನಿಶಿದಿತ ವಲಯ ಎಂದು ಘೋಷಿಸಿದ್ದ, ಯಾವುದೇ ಚುನಾವಣಾ ಪ್ರಚಾರ ಮತ್ತು ಸಂಬಂಧಿತ ಕಾರ್ಯ ನಡೆಸುವಂತಿರಲಿಲ್ಲ. ಆದರೆ ಬಿಜೆಪಿ ಪಕ್ಷದ  ಕಾರ್ಯಕರ್ತರು ಪಕ್ಷದ ಶಾಲು, ಧ್ವಜ , ಬಂಟಿಂಗ್‌ಗಳೊಂದಿಗೆ ಪ್ರಚಾರ ನಡೆಸಿ, ಜಮಖಂಡಿ ಕ್ಷೇತ್ರ ಮತಗಟ್ಟೆ ಸಂಖ್ಯೆ 125 ಬಳಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಇದಕ್ಕೆ ಪೊಲೀಸರು ಆಕ್ಷೇಪಿಸಿದ್ದರಿಂದ ಡಿಸಿ ಹಾಗೂ ಎಸ್ಪಿಯವರ ಜತೆ ಕಾರ್ಯಕರ್ತರು ತಮ್ಮ ಪುಂಡಾಟಿಕೆಯನ್ನು ಪ್ರದರ್ಶಿಸಿದ್ದಾರೆ.
ಈ ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಹಾಗೂ ಚುನಾವಣಾ ಅಧಿಕಾರಿ ಕೆ.ಜೆ. ಶಾಂತರಾಮ್ ಮತ್ತು ಎಸ್‌ಪಿ ಸಿ. ಬಿ. ರಿಷ್ಯಂತ್ ದಾಳಿ ನಡೆಸಿ ನಿಷೇಧಿತ ಪ್ರದೇಶದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದವರನ್ನು ವಶಕ್ಕೆ ಪಡೆದರು.
ಕಾರ್ಯಕರ್ತರಿಗೆ ಎಸ್ಪಿ ಸಿ.ಬಿ. ರಿಷ್ಯಂತ್ ಹಾಗು ಜಿಲ್ಲಾಧಿಕಾರಿ ಕೆ.ಜಿ ಶಾಂತಾರಾಮ್ ಖಡಕ್ ವಾರ್ನಿಂಗ್ ನೀಡಿ, ಹೆಚ್ಚಿಗೆ ಮಾತನಾಡಬೇಡಿ, ನೀವು ಕಾನೂನು ಉಲ್ಲಂಘನೆ ಮಾಡಿದ್ದೀರಿ, ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ.

Leave a Reply