ಇಲ್ಲಿ ತತ್ವ ಸಿದ್ಧಾಂತಗಳಿಗೆ ಬೆಲೆಯೇ ಇಲ್ಲ – ಬಿಜೆಪಿಯ ಬಣ್ಣ ಬಯಲುಮಾಡಿದ ಎಲ್ ಚಂದ್ರಶೇಖರ್

ಲೋಕಸಭಾ  ಉಪಚುನಾವಣೆಗೆ  ಎರಡು  ದಿನ  ಇರುವಾಗ  ರಾಮನಗರ   ಕ್ಷೇತ್ರದ  ಬಿಜೆಪಿ  ಅಭ್ಯರ್ಥಿ  ಎಲ್ . ಚಂದ್ರಶೇಖರ್  ಅವರು  ಕಣದಿಂದ  ಹಿಂದೆ  ಸರಿದಿದ್ದಾರೆ . ಕೇವಲ  15  ದಿನಗಳ  ಹಿಂದೆ  ಅಷ್ಟೇ  ಕಾಂಗ್ರೆಸ್ ನಿಂದ ಬಿಜೆಪಿಗೆ  ಪಕ್ಷಾಂತರವಾಗಿದ್ದರು . ಆದರೆ  ಕೇವಲ  15   ದಿನಗಳಿಗೆ  ಬಿಜೆಪಿ  ಪಕ್ಷದ  ವಾತಾವರಣಕ್ಕೆ  ಬೇಸತ್ತು , ಈಗ  ಕಾಂಗ್ರೆಸ್  ಪಕ್ಷಕ್ಕೆ  ಮರಳಿದ್ದಾರೆ .
ಇದರ ಹಿನ್ನಲೆಯಲ್ಲಿ ಮಾತನಾಡಿದ ಅವರು ‘ ನನಗೆ ಬಿಜೆಪಿಯ ನಾಯಕರಿಂದ ಯಾವುದೇ ರೀತಿಯ ಬೆಂಬಲವು ಸಿಗಲಿಲ್ಲ. ಯಡಿಯೂರಪ್ಪನವರು  ನನ್ನನ್ನು  ಹೋರಿಗನವನ ತರ ನೋಡಿ  ಬೇಧ  ಭಾವ  ಮಾಡಿದರು . ಹಾಗು  ಅವರ  ಮಗನ  ಪರ  ಪ್ರಚಾರದಲ್ಲೇ  ಸಂಪೂರ್ಣವಾಗಿ  ತೊಡಗಿಸಿಕೊಂಡಿದ್ದಾರೆ . ನನ್ನ ತಂದೆಯ ಮಾತನ್ನು ಧಿಕ್ಕರಿಸಿ ಬಿಜೆಪಿ ಪಕ್ಷಕ್ಕೆ  ಸೇರ್ಪಡೆಯಾಗಿದ್ದೆ. ಆದರೆ ಇಲ್ಲಿ ಕಾರ್ಯಕರ್ತರ  ತತ್ವ ಸಿದ್ಧಾಂತಗಳಿಗೆ ಬೆಲೆಯೇ ಇಲ್ಲ. ಜನ ಸೇವೆ ಮಾಡುವ ಬದಲು ಬರಿ ಒಳ ಸಂಚು ಮಾಡುವುದರಲ್ಲಿ ಬ್ಯುಸಿ ಆಗಿರುತ್ತಾರೆ. ‘ ಎಂದು ಬೇಸರ ವ್ಯಕ್ತಪಡಿಸಿದರು .

Leave a Reply