ಕೊಡ್ಲಿಗಿ ತಾಲೂಕು : ಎರಡು ಕೈಗಳಿಲ್ಲದ ಯುವತಿ ಕಾಲ್ಗಳಿಂದ ಮತದಾನ

ಬೇಜವಾಬ್ದಾರಿ ತನದಿಂದ ಮತ ಚಲಾಯಿಸುವುದಕ್ಕೆ ಹಿಂಜರಿಯುವ ಮನೋಭಾವವುಳ್ಳ ಜನರ ನಡುವೆ, ಎರಡು ಕೈಗಳಿಲ್ಲದ ಯುವತಿ ಕಾಲಿನಿಂದ ಮತದಾನ ಮಾಡಿ ಮಾದರಿಯಾಗಿದ್ದಾರೆ.
ಅಂಗವಿಕಲೆ ಲಕ್ಷ್ಮೀದೇವಿ ಅವರು ತಾಲೂಕಿನ ಗುಂಡಮುನಾಗು ಗ್ರಾಮದಲ್ಲಿನ ಮತಗಟ್ಟೆ 105ರಲ್ಲಿ ಹಕ್ಕು ಚಲಾವಣೆ ಮಾಡಿದರು.
ಲಕ್ಷ್ಮೀದೇವಿಯವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾನದ ರಾಯಭಾರಿಯಾಗಿದ್ದರು ಎಂಬುವುದು ವಿಶೇಷ.
ಪ್ರತಿಯೊಬ್ಬ ನಾಗರಿಕನು ಮತ ಚಲಾಯಿಸಬೇಕು. ಮತ ಚಲಾಯಿಸುವುದು ಪ್ರತಿಯೊಬ್ಬನ ಹಕ್ಕು, ಮೇಲಾಗಿ ಕರ್ತವ್ಯ. ಒಂದು ಪ್ರದೇಶದ ಐದು ವರ್ಷದ ಭವಿಷ್ಯ ಮತಗಳು ನಿರ್ಧರಿಸುತ್ತದೆ. ಒಂದೊಂದು ಮತವು ಬಹಳ ಪ್ರಮುಖ ಪಾತ್ರವಹಿಸುತ್ತದೆ. ಕೇವಲ ಒಂದು ಮತಗಳ ಹಿನ್ನಡೆಯಿಂದ ಅಭ್ಯರ್ಥಿಗಳು ಸೋತಿರುವ ಉದಾಹರಣೆ ಹಲವಾರು. ಆದರಿಂದ ಪ್ರತಿಯೊಬ್ಬರೂ ಮತ ಚಲಾಯಿಸುವುದರ ಮೂಲಕ ನಾಡಿನ ಭವಿಷ್ಯ ರೂಪಿಸುವಲ್ಲಿ ಪಾತ್ರರಾಗಬೇಕು.

Leave a Reply