ಲೋಕಸಭಾ ಉಪಚುನಾವಣೆಯಲ್ಲಿ ಜೆಡಿಎಸ್ – ಕಾಂಗ್ರೆಸ್ ಮೈತ್ರ ಹಾಗು ಬಿಜೆಪಿಗೆ ಜಟಾಪಟಿ – ಬಿಜೆಪಿಗೆ ಮುಖಭಂಗ ಸಾಧ್ಯತೆ

ತೀವ್ರ ಕುತೂಹಲ ಕೆರಳಿಸಿರುವ 5 ಕ್ಷೇತ್ರದ ಲೋಕಸಭಾ ಉಪಚನಾವಣೆಯ ಮತದಾನ ಇಂದು ನೆಡಯಲಿದೆ. ಮೈತ್ರಿ ಪಕ್ಷದ ಅಭ್ಯರ್ಥಿಗಳು ತಮ್ಮ ಕಾರ್ಯ ನಿಷ್ಠೆಯಿಂದ ಅಪಾರ ಜನಾಭಿಮಾನ ಗಳಿಸಿರುವದರಿಂದ ಐದು ಕ್ಷೇತ್ರದಲ್ಲೂ ಗೆಲುವಿನ ನಗೆ ಬೀರುವ ವಿಶ್ವಾಸದಲ್ಲಿದ್ದಾರೆ.
ಶಿವಮೊಗ್ಗ 
ಶಿವಮೊಗ್ಗದಲ್ಲಿ ಜೆಡಿಎಸ್ ಪಕ್ಷದ ಪರವಾಗಿ ಕರ್ನಾಟಕ ಕಂಡ ಅತ್ಯಂತ ಶ್ರೇಷ್ಠ ರಾಜಕಾರಣಿ, ಬಡವರ ಬಂಧು ಎಸ್. ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪನವರು ಕಣಕ್ಕಿಳಿಯಲಿದ್ದಾರೆ. ಇವರ ವಿರುದ್ಧ, ಅಕ್ರಮ ಆಸ್ತಿ ಗಳಿಕೆಯ ಆರೋಪದ ಮೇಲೆ ಜೈಲು ಪಾಲಾದ ಬಿಜೆಪಿ ಪಕ್ಷದ ಅಧ್ಯಕ್ಷ ಬಿ.ಎಸ್ ಯೆಡಿಯೂರಪ್ಪನವರ ಪುತ್ರ ಬಿ.ವೈ ರಾಘವೇಂದ್ರ ಅವರು ಸ್ಪರ್ಧಿಸಲಿದ್ದಾರೆ. ಜನರು ರಾಘವೇಂದ್ರ ಅವರನ್ನು ಗುರುತಿಸಲು ಸಹ ಕಷ್ಟ ಪಡುತ್ತಿರುವುದರಿಂದ, ಶಿವಮೊಗ್ಗ ಬಿಜೆಪಿಯ ಭದ್ರಕೋಟೆಯಾಗಿದ್ದರು, ಗೆಲುವು ಮಧು ಬಂಗಾರಪ್ಪನವರ ಪಾಲಾಗುವ ಸಾಧ್ಯತೆ ಹೆಚ್ಚಿದೆ.
ಬಳ್ಳಾರಿ 
ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆಯ ಅಧಿಪತಿ ಶ್ರೀ ರಾಮುಲು ಅವರ ಸಹೋದರಿ ಜೆ. ಶಾಂತು ಅವರು ಜನನಾಯಕನೆಂದು ಖ್ಯಾತರಾಗಿರುವ ಕಾಂಗ್ರೆಸ್ ಪಕ್ಷದ ವಿ. ಎಸ್ ಉಗ್ರಪ್ಪನವರ ವಿರುದ್ಧ  ಬಿಜೆಪಿ ಪರ ಸ್ಪರ್ದಿಸಲಿದ್ದಾರೆ. ಬಳ್ಳಾರಿ ಆಂಧ್ರದಿಂದ ಬಂದು ಆಳುತ್ತಿರುವವರ ಸೊತ್ತಲ್ಲ ಎಂದು ಸಾಬೀತಾಗಿವೆ ಎಲ್ಲ ಲಕ್ಷಣಗಳಿವೆ ಈ ಬಾರಿ ಎದ್ದು ಕಾಣುತ್ತಿದೆ.
ಜಮಖಂಡಿ 
ಜಮಖಂಡಿಯಲ್ಲಿ  ಕಾಂಗ್ರೆಸ್ ಪಕ್ಷದ ಪರ ಮಾಜಿ ಸಚಿವ ದಿ.ಸಿದ್ದು ನ್ಯಾಮೇಗೌಡ ಅವರ ಪುತ್ರ ಆನಂದ್ ನ್ಯಾಮೇಗೌಡ ಅವರು ಬಿಜೆಪಿ ಪಕ್ಷದ ಶ್ರೀಕಾಂತ್ ಕುಲಕರ್ಣಿ ಅವರ ವಿರುದ್ಧ ಸ್ಪರ್ದಿಸಲಿದ್ದಾರೆ. ದಿ.ಸಿದ್ದು ನ್ಯಾಮೇಗೌಡ ಅವರು ತಮ್ಮ ನಿಷ್ಠಾವಂತ ಜನಸೇವೆಯಿಂದ ಜನರ  ಪ್ರೀತಿ ಗಳಿಸಿದ್ದರು. ಈ ಕ್ಷೇತ್ರದಲ್ಲಿ ಇಬ್ಬರ ನಡುವೆಯೂ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.
ಮಂಡ್ಯ 
ಮಂಡ್ಯ ಕ್ಷೇತ್ರ ಜೆಡಿಎಸ್ ನ ಭದ್ರಕೋಟೆ. ಜೆಡಿಎಸ್ ಪಕ್ಷದಿಂದ  ಯಾವುದೇ ಅಭ್ಯರ್ಥಿ ಸ್ಪರ್ದಿಸಿದರು, ಎದುರಾಳಿಗೆ ಸೋಲು ಕಟ್ಟಿಟ್ಟ ಬುತ್ತಿ. ಈ ಬಾರಿ ಬಿಜೆಪಿ ಪಕ್ಷದಿಂದ ಡಿ. ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದ ಶಿವರಾಮೇಗೌಡ ಅವರ ವಿರುದ್ಧ ಸ್ಪರ್ಧೆಸಲಿದ್ದಾರೆ. ಮಂಡ್ಯದ ಜನತೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ತಮ್ಮ ಋಣ ತೀರಿಸಲು ಕಾತುರದಿಂದ ಕಾಯುತ್ತಿದ್ದಾರೆ.
ರಾಮನಗರ 
ರಾಮನಗರದಲ್ಲಿ ಈಗಾಗಲೇ ಜೆಡಿಎಸ್ ಪಕ್ಷದ ಅನಿತಾ ಕುಮಾರಸ್ವಾಮಿ ಅವರು ಜಯಭೇರಿಯಾಗಿದ್ದರೆ. ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದ ಎಲ್. ಚಂದ್ರಶೇಖರ್, ಯುದ್ಧಕ್ಕೆ ಮುನ್ನವೇ ಶಸ್ತ್ರ ತ್ಯಾಗ ಮಾಡಿ, ಕಣದಿಂದ ಹಿಂದೆ ಸರಿದು, ಅನಿತಾ ಕುಮಾರಸ್ವಾಮಿ ಅವರಿಗೆ ಬೆಂಬಲ ಸೂಚಿಸಿದ್ದಾರೆ.  ಕ್ಷೇತ್ರದ ಅಭಿವೃದ್ಧಿ ಹಾಗು ಬಿಜೆಪಿ ಪಕ್ಷದ ವಾತಾವರಣಕ್ಕೆ ಬೇಸತ್ತು, ಎಲ್ ಚಂದ್ರಶೇಖರ್ ಅವರು ಚುನಾವಣೆಯಿಂದ ಹಿಂದೆ ಸರಿದಿದ್ದಾರೆ.

Leave a Reply