ನಗರದಲ್ಲಿ ಸಿಎಂ ಕುಮಾರಸ್ವಾಮಿ ಏಕಾಂಗಿ ಪ್ರಯಾಣ…!

ಸರಳತೆ ಅತ್ಯಂತ ಸ್ವಾಭಾವಿಕವಾದರೂ ಆ ಸ್ಥಿತಿಯಲ್ಲಿರುವುದು ಅತ್ಯಂತ ಸುಲಭವಾದರೂ ಅಸ್ವಾಭಾವಿಕವಾಗಿರುವುದೇ ಜನರ ಸ್ವಭಾವ. ಅದರಲ್ಲೂ ರಾಜಕಾರಣಿಗಳು ಹಾಗು ಸೆಲೆಬ್ರೆಟಿಗಳು ತಮ್ಮ ವಿಜೃಂಭಣೆಯ ಜೀವನಶೈಲಿಯ ತೋರುವಿಕೆಯಲ್ಲೇ ಇರುತ್ತಾರೆ.

ಅಂಥದರಲ್ಲಿ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ತಮಗೆ ನೇಮಿಸಿರುವ ಭದ್ರತಾ ಸಿಬ್ಬಂದಿಗಳಿಲ್ಲದೆ ನಗರದಲ್ಲಿ  ಒಂಟಿಯಾಗಿ ಪ್ರಯಾಣಿಸಿ ಅಚ್ಚರಿ ಮೂಡಿಸಿದ್ದಾರೆ. ತಾಜ್ ವೆಸ್ಟ್ ಎಂಡ್ ನಿಂದ ಮುಖ್ಯಮಂತ್ರಿಯವರು ತಮ್ಮ ಎಲ್ಲಾ ಭದ್ರತಾ ಸಿಬ್ಬಂದಿಗಳನ್ನು ಅಲ್ಲೇ ಬಿಟ್ಟು, ಕೇವಲ ತಮ್ಮ ಚಾಲಕರೊಡನೆ ಕಾರ್ ನಲ್ಲಿ ಏಕಾಂಗಿಯಾಗಿ  ಪ್ರಯಾಣಿಸಿದರು.

ಹಿಂದಿನ ಕಾಲದಲ್ಲಿ ರಾಜರು ಪ್ರಜೆಗಳ ಕಷ್ಟ ಅರಿಯಲು ಮಾರುವೇಷದಲ್ಲಿ ರಾಜ್ಯಪ್ರವಾಸ ಕೈಗೊಳ್ಳುತ್ತಿದ್ದರು. ಅದೇ ರೀತಿ ಈಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದ ಜನತೆ ಟ್ರಾಫಿಕ್ ನಲ್ಲಿ ಪಡುವ ಪಾಡನ್ನು ಅರಿಯಲು ಕೇವಲ ಮುಖ್ಯಮಂತ್ರಿ ಹಾಗು ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದವರಿಗೆ ಲಭ್ಯವಿರುವ ‘ಜೀರೋ ಟ್ರಾಫಿಕ್ ‘ ಎಂಬ ವಿಶಿಷ್ಟ ಸೌಲಭ್ಯವನ್ನು ತೊರೆದು ಸಂಚರಿಸಿದ್ದಾರೆ.

Leave a Reply