ನನ್ನ ರೈತರನ್ನು ಟಚ್ ಮಾಡಿದರೆ ಹುಷಾರ್ ! ಬ್ಯಾಂಕ್ ಮ್ಯಾನೇಜರ್ ಗಳಿಗೆ ಖಡಕ್ ವಾರ್ನಿಂಗ್ ನೀಡಿದ ಕುಮಾರಸ್ವಾಮಿ

ರೈತರ ಸಾಲ ಮನ್ನಾ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದರು ರಾಷ್ಟ್ರೀಕೃತ ಬ್ಯಾಂಕ್ ಗಳು, ರೈತರಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ. ಚಾಮರಾಜನಗರದ ಉಮಾಪತಿ ಎಂಬ ರೈತನು ಟ್ರ್ಯಾಕ್ಟರ್ ಗಾಗಿ 1 ಲಕ್ಷದ 75 ಸಾವಿರ ರೂ. ಆಕ್ಸಿಸ್ ಬ್ಯಾಂಕ್ ನಲ್ಲಿ ಟ್ರ್ಯಾಕ್ಟರ್ ಲೋನ್ ಪಡೆದಿದ್ದರು. ಇದನ್ನು ಮರುಪಾವಿತಿಸುವಲ್ಲಿ ವಿಫಲರಾದ ಉಮಾಪತಿ ಅವರ ಮೇಲೆ ಅರೆಸ್ಟ್ ವಾರೆಂಟ್ ಜಾರಿಗೊಳಿಸಿ, ಕೊಲ್ಕತ್ತಾ ಕೋರ್ಟ್ ನಲ್ಲಿ ದೂರು ದಾಖಲಿಸಿದ್ದಾರೆ.
ಅಲ್ಲದೆ ವೀರಪತ್ತ ಎಂಬ ರೈತನಿಗೂ ಸಹ ವಿಜಯ ಬ್ಯಾಂಕ್ ನ ಮ್ಯಾನೇಜರ್ ಗಳು ವಿಪರೀತ ಕಿರುಕುಳ ನೀಡುತಿದ್ದರು.
ಬ್ಯಾಂಕ್ ಅಧಿಕಾರಿಗಳ ನಡುವಳಿಕೆಯಿಂದ ಕಂಗಾಲಾದ ಅನ್ನದಾತರ ಸುದ್ದಿಯನ್ನು ಖಾಸಗಿ ಚಾನೆಲ್ ಒಂದರಲ್ಲಿ ವೀಕ್ಷಿಸಿದ ಕುಮಾರಸ್ವಾಮಿ ಅವರು, ತಕ್ಷಣವೇ ಮಾಧ್ಯಮಕ್ಕೆ ಕರೆ ಮಾಡಿ ನೊಂದ ರೈತರಿಗೆ  ಧೈರ್ಯ ತುಂಬಿ ಸಾಂತ್ವನ ಹೇಳಿದ್ದಾರೆ.
‘ ನನ್ನ ರೈತರನ್ನು ಯಾರು ಸಹ ಟಚ್ ಮಾಡಲು ಬಿಡುವುದಿಲ್ಲ. ಆಕ್ಸಿಸ್ ಬ್ಯಾಂಕ್ ನ ಕಾನೂನು ಸಲಹೆ ನೀಡುವ ತಂಡ ಕೋಲ್ಕತಾದಲ್ಲಿ ಇರುವುದರಿಂದ, ಅಲ್ಲಿನ ಕೋರ್ಟ್ ನಲ್ಲಿ ದೂರು ದಾಖಲಿಸಲಾಗಿದೆ ಅಷ್ಟೇ. 40 ಸಾವಿರ ಕೋತಿ ಸಾಲ ಮಾಡುವುದು ಸುಲಭದ ಮಾತಲ್ಲ. ಇದಕ್ಕೆ ಸಮಯ ಹಿಡಿಯುತ್ತದೆ. ರೈತರನ್ನು ಬಂಧಿಸಲು ಯತ್ನಿಸುವ ಬ್ಯಾಂಕ್ ಮ್ಯಾನೇಜರ್ ಗಳನ್ನೇ ಬಂಧಿಸಲಾಗುತ್ತದೆ. ಇದರ ಬಗ್ಗೆ ಯಾವ ರೈತರು ಕಂಗಾಲಾಗುವ ಅವಶ್ಯಕತೆ ಇಲ್ಲ. ನಿಮ್ಮ ಜೊತೆ ನಾನಿದ್ದೇನೆ ‘ ಎಂದು  ಆತ್ಮಹತ್ಯೆಗೆ ಮುಂದಾಗಿದ್ದ ರೈತನಿಗೆ ನೇರವಾಗಿ ಮಾಧ್ಯಮದ ಮೂಲಕ ಸಂಪರ್ಕಿಸಿ ಸಾಂತ್ವನ ಹೇಳಿ ಭರವಸೆ ನೀಡಿದ್ದಾರೆ.

Leave a Reply