ಬಿಜೆಪಿ ಮುಖಂಡನಿಂದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರದ ಬೆದರಿಕೆ…!!!

ಕೈಲಾಗದವರು ಮೈ ಪರಚಿಕೊಂಡರೆ, ಬಿಜೆಪಿ ನಾಯಕರು ಬೇರೆ ಅವರ ಮೈ ಪರಚಲು ಹೋಗುತ್ತಾರೆ. ನಮ್ಮ ವಿರುದ್ಧ ಯಾರಾದರೂ ಕೀಳಾಗಿ ಮಾತನಾಡಿದರೆ, ಅವರೇ ತಪ್ಪೆಂದು ಸಾಬೀತು ಪಡಿಸುವುದು ಲೋಕಾರೂಢಿ. ಆದರೆ ಬಿಜೆಪಿ ನಾಯಕರು(ಪುಂಡರು) ತಮ್ಮ ವಿರುದ್ಧ ಕೀಳಾಗಿ ಮಾತನಾಡಿದವರನ್ನು ಅತ್ಯಾಚಾರ ಮಾಡುತ್ತಾರೆ.

 “ಬಿಜೆಪಿ ಮುಖಂಡ ಸುಭಾಷ್ ಶಿರೋಡ್ಕರ್ ವಿರುದ್ಧ ಪ್ರಚಾರ ಕೈಗೊಂಡಲ್ಲಿ, ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗುವ ಬೆದರಿಕೆಯನ್ನು ಅವರ ಬೆಂಬಲಿಗರು ಹಾಕಿದ್ದಾರೆ” ಎಂದು ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಗೋವಾ ಪ್ರದೇಶ ಮಹಿಳಾ ಕಾಂಗ್ರೆಸ್  ಕಾರ್ಯದರ್ಶಿ ದಿಯಾ ಶೇಟ್ಕರ್ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಶಿರೋಡ್ಕರ್ ಬೆಂಬಲಿಗರು ದೂರವಾಣಿ ಕರೆ ಮಾಡಿ ಈ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. “ನನ್ನನ್ನು ಅಶ್ಲೀಲ ಪದಗಳಿಂದ ನಿಂದಿಸಿ ರವಿವಾರ ಮುಂಜಾನೆ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದಾರೆ” ಎಂದು ಅವರು ಹೇಳಿದ್ದಾರೆ.

ಶೇಟ್ಕರ್ ಕ್ಷೇತ್ರಕ್ಕೆ ಕಾಲಿಡದಂತೆಯೂ ಬೆದರಿಕೆ ಹಾಕಿದ್ದಾರೆ. ಮಹಿಳೆಯರಿಗೆ ಕಿರುಕುಳ ನೀಡುವ ಉದ್ದೇಶದಿಂದ ಶಿರೋಡ್ಕರ್ ಬೆಂಬಲಿಗರು ಇಂಥ ಹೀನ ಕೃತ್ಯದ ಬೆದರಿಕೆ ಹಾಕಿದ್ದಾರೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

 

Leave a Reply