ಧ್ರುವ ಸರ್ಜಾ ಫ್ಯಾನ್ಸ್ ಗೆ ಮತ್ತೊಂದು ಸಿಹಿ ಸುದ್ದಿ…!

ಧ್ರುವ ಸರ್ಜಾ ನಟನೆಯ ಬಹು ನಿರೀಕ್ಷಿತ ಚಿತ್ರ ‘ ಪೊಗರು ‘ ಟೀಸರ್ ಅನ್ನು ಇತ್ತೀಚೆಗಷ್ಟೇ ಧ್ರುವ ಸರ್ಜಾ ಅವರ ಜನ್ಮದ ದಿನದ ಪ್ರಯುಕ್ತ ರೆಲೀಸ್ ಮಾಡಲಾಗಿತ್ತು. ಈಗ ಪೊಗರು ಚಿತ್ರ ತಂಡದಿಂದ, ಆಕ್ಷನ್ ಪ್ರಿನ್ಸ್ ಧ್ರುವ ಅವರ ಅಭಿಮಾನಿಗಳಿಗೆ ಹಬ್ಬಕ್ಕೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದಾರೆ. ಪೊಗರು ಚಿತ್ರಕ್ಕೆ ಈಗ ನಾಯಕಿ ಫಿಕ್ಸ್ ಆಗಿದ್ದಾರೆ. ‘ಕಿರಿಕ್ ಪಾರ್ಟಿ’ ಖ್ಯಾತಿಯ ರಶ್ಮಿಕಾ ಮಂದಣ್ಣ ಈ ಚಿತ್ರಕ್ಕೆ ಸಹಿ ಹಾಕಿದ್ದಾರೆ.
ಹೌದು, ರಶ್ಮಿಕಾ ದರ್ಶನ್ ಜೊತೆ ನಟಿಸಿರುವ ಯಜಮಾನ ಸಿನಿಮಾ ಇನ್ನೂ ರಿಲೀಸ್ ಆಗಬೇಕಿದೆ. ಜೊತೆಗೆ ಟಾಲಿವುಡ್ ನಲ್ಲೂ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ರಶ್ಮಿಕಾ, ಧ್ರುವ ಸರ್ಜಾ ನಟನೆಯ ಪೊಗುರು ಚಿತ್ರಕ್ಕೆ ಎಂಟ್ರಿಕೊಟ್ಟಿದ್ದಾರೆ.
ನಂದಕಿಶೋರ್ ನಿರ್ದೆಶನದಲ್ಲಿ ಮೂಡಿ ಬರುತ್ತಿರುವ ಪೊಗರು ಚಿತ್ರದ ಶೂಟಿಂಗ್ ನ ಮೊದಲ ಶೆಡ್ಯೂಲ್ ಮುಗಿಸಿ, ಎರಡನೇ ಶೆಡ್ಯೂಲ್ ಶೂಟಿಂಗ್ ಇದೇ ತಿಂಗಳ 20 ರಂದು ಆರಂಭವಾಗಲಿದ್ದು, ರಶ್ಮಿಕಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈ ಸಿನಿಮಾವನ್ನು ಬಿ.ಎನ್. ಗಂಗಾಧರ್ ರಾವ್ ನಿರ್ಮಾಣ ಮಾಡುತ್ತಿದ್ದು, ಸಿನಿಮಾಕ್ಕೆ ಅರ್ಜುನ್ ಸರ್ಜಾ ಕಥೆ ಬರೆದಿದ್ದಾರೆ.

Leave a Reply