ಕೆಜಿಎಫ್ ಚಿತ್ರರತಂಡದಿಂದ ಯಶ್ ಅಭಿಮಾನಿಗಳಿಗೆ ರಾಕಿಂಗ್ ಸುದ್ದಿ…!

‘ ಕೆಜಿಎಫ್ ಬರೋವರ್ಗು ಮಾತ್ರ ಬೇರೆ ಅವರ ಹವಾ, ಬಂದ್ಮೇಲೆ ಕೆಜಿಎಫ್ ದೇ ಹವಾ ‘ ಎಂದು ಬೀಗುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಕೆಜಿಎಫ್ ಚಿತ್ರತಂಡ ಸಿಹಿ ಸುದ್ದಿ ನೀಡಿದೆ. ಯಶ್ ಹಾಗು ಚಿತ್ರತಂಡದ ಎರಡು ವರ್ಷದ ಶ್ರಮದ ಒಂದು ಸಣ್ಣ ಝಲಕ್ ಯೂಟ್ಯೂಬ್ ನಲ್ಲಿ ಅಬ್ಬರಿಸಲು ಸಜ್ಜಾಗಿದೆ. ಹೌದು, ಕೆಜಿಎಫ್ ಟ್ರೈಲರ್ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಅನೌನ್ಸ್ ಮಾಡಿದೆ. ಅತಿ ಹೆಚ್ಚು ಮೊತ್ತಕ್ಕೆ ಹಿಂದಿ ಹಕ್ಕನ್ನು ಮಾರಿ ದಾಖಲೆ ಸೃಷ್ಟಿಸಿರುವ ಕೆಜಿಎಫ್ ಟ್ರೈಲರ್ ನೊ.9 ರಂದು ರಿಲೀಸ್ ಆಗುತ್ತಿದೆ.
‘ ಕನ್ನಡ ಸಿನಿಮಾ ಬೇರೆ ಲೆವೆಲ್ ಗೆ ರೀಚ್ ಆಗತ್ತೆ. ಇದು ಕೇವಲ ಆರಂಭ’ ಎಂದು ಕನ್ನಡ ಚಿತ್ರದರಂಗದ ಬಗ್ಗೆ ತಮ್ಮ ಕನಸನ್ನು SIMA ಅವಾರ್ಡ್ ಸಮಾರಂಭದಲ್ಲಿ ಹಂಚಿಕೊಂಡಿದ್ದ ಯಶ್ ಅವರ ಕನಸು ಈಗ ನನಸಾಗುವಂತಿದೆ. ಕೆಜಿಎಫ್ ಚಿತ್ರದಿಂದ ಇಡೀ ಭಾರತ ಚಿತ್ರರಂಗವೇ ಕನ್ನಡ ಚಿತ್ರದತ್ತ ತಿರುಗಿ ನೋಡುವ ವಿಶ್ವಾಸ ಕೇವಲ ಯಶ್ ಮತ್ತು ಅವರ ಅಭಿಮಾನಿಗಳಿಗೆ ಮಾತ್ರವಲ್ಲ, ಇಡೀ ಕನ್ನಡ ಚಿತ್ರರಂಗಕ್ಕಿದೆ.
“ಕೆ.ಜಿ.ಎಫ್’ ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿರುವುದರಿಂದ, ಚಿತ್ರದ ಟ್ರೇಲರ್‌ಗಳನ್ನು ಕೂಡ ಏಕ ಕಾಲಕ್ಕೆ ಐದು ಭಾಷೆಗಳಲ್ಲಿ ಬಿಡುಗಡೆಗೊಳಿಸಲು ಚಿತ್ರತಂಡ ಪ್ಲಾನ್‌ ಮಾಡಿಕೊಂಡಿದೆ.
ಸೆಟ್ಟೇರಿದಾಗಿನಿಂದಲೂ ಚಿತ್ರದ ಫ‌ಸ್ಟ್‌ಲುಕ್‌, ನಡುವೆ ಒಂದೆರಡು ಪೋಸ್ಟರ್‌ಗಳು, ಸ್ಟಿಲ್‌ಗ‌ಳನ್ನು ಹೊರತುಪಡಿಸಿದರೆ, ಚಿತ್ರತಂಡ ಇಲ್ಲಿಯವರೆಗೆ ಚಿತ್ರಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಏನೂ ಬಿಟ್ಟುಕೊಟ್ಟಿಲ್ಲ. ಹಾಗಾಗಿ, ಚಿತ್ರದ ಬಗ್ಗೆ ಕುತೂಹಲ ಹಾಗೂ ನಿರೀಕ್ಷೆ ಎರಡೂ ಇದೆ.

Leave a Reply