ಬಗರ್ ಹುಕಂ ಅಧಿಕಾರಿಗಳಿಂದ ಹಣ ವಸೂಲಿ : ಸಚಿವರಿಂದ ಆಕ್ರೋಶ

ತಾಲೂಕಿನಲ್ಲಿ ಜಮೀನಿಲ್ಲದ ರೈತರಿಗೆ ಬಗರ್ ಹುಕಂ ಸಮಿತಿಯಿಂದ ಜಮೀನನ್ನು ಮಂಜೂರು ಮಾಡಲು ಕಮಿಟಿಯ ಸದಸ್ಯರುಗಳು ಬೇಕು. ಭೂ ಸಾಗುವಳಿ ಚೀಟಿ ನೀಡಲು ತಾಲೂಕಿನ ರೈತರು ಲಕ್ಷಾಂತರ ಹಣವನ್ನು ಅಧಿಕಾರಿಗಳಿಗೆ ನೀಡುತ್ತಿರುವುದು ಖಂಡನೀಯ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್. ಆರ್ ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ತಾಲೂಕು ಕಛೇರಿ ಆವರಣದಲ್ಲಿ ಪತ್ರಿಕೆಯೊಡನೆ ಮಾತನಾಡಿದ ಅವರು ತಾಲೂಕಿನ ಅಧಿಕಾರಿಗಳಿಗೆ ರೈತರನ್ನು ಸುಲಿಗೆ ಮಾಡುತ್ತಿರುವುದು ಗ್ರಾಮ ಲೆಕ್ಕಾಧಿಕಾರಿ, ಕಂದಾಯ ಅಧಿಕಾರಿ, ಭೂಮಾಪಕರು ಹಾಗೂ ಸಾಗುವಳಿ ಚೀಟಿ ನೀಡುವ ಗುಮಾಸ್ತ ಇವರುಗಳು ರೈತರಿಂದ ಇಂತಿಷ್ಟೆ ಹಣ ನೀಡಬೇಕೆಂದು ಆಜ್ಞೆ ಮಾಡುತ್ತಿರುವುದು ತಿಳಿದಿದ್ದರೂ ಸಹ ಗ್ರಾಮೀಣ ಭಾಗದ ರೈತರಲ್ಲಿ ಸಾಕಷ್ಟು ಬಾರಿ ಹಣ ನೀಡದಿರುವಂತೆ ತಿಳಿಸಿದ್ದರೂ ರೈತರ ಆತುರದ ನಿರ್ಧಾರದಿಂದ ತಾಲೂಕಿನ ಅಧಿಕಾರಿಗಳ ಹಣದಾಹ ಹೆಚ್ಚಾಗುತ್ತಿದೆ.  ಇದಕ್ಕೆ ಕಡಿವಾಣ ಹಾಕಲು ಪ್ರತಿ ತಿಂಗಳು ರೆವೆನ್ಯೂ ಇಲಾಖೆಯ ಎಲ್ಲ ಅಧಿಕಾರಿಗಳಿಗೂ ಡಿ.ದರ್ಜೆಯ ನೌಕರರ ಸಭೆಯನ್ನು ಕರೆಯುತ್ತಿದ್ದೇನೆ. ಈಗಾಗಲೇ ಸಾಕಷ್ಟು ದೂರುಗಳಿದ್ದರೂ ಹಣ ಕೊಡುವವರು ಇರುವವರೆಗೂ ಪಡೆಯುವವರು ಇದ್ದೇ ಇರುತ್ತಾರೆ.
ದಿನಗಳಲ್ಲಿ ನನ್ನ ಗಮನಕ್ಕೆ ಬರದ ಯಾವುದೇ ಸಾಗುವಳಿ ಚೀಟಿ ಹಾಗೂ ಖಾತೆಯನ್ನು ಮಾಡದಂತೆ ಈಗಾಗಲೇ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದು ಮುಂದಿನ ದಿನಗಳಲ್ಲಿ ರೈತರುಗಳ ಮನೆಬಾಗಿಲಿಗೆ ಸಾಗುವಳಿ ಚೀಟಿ ಹಾಗೂ ಖಾತೆಯನ್ನು ತಲುಪಿಸುವಂತಹ ಕೆಲಸವನ್ನು ಅಧಿಕಾರಿಗಳಿಂದ ಮಾಡಿಸುತ್ತೇನೆ ಎಂದು ತಿಳಿಸಿದರು.
ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಐಟಿಐ ಸ್ಥಾಪಿಸಿ ನಿರುದ್ಯೋಗಿ ಯುವಕರಿಗೆ ಕೆಲಸ ನೀಡುವ ಸಲುವಾಗಿ ಈಗಾಗಲೇ ಜಿ. ಹೊಸಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಸುಮಾರು 20 ಎಕರೆ ಜಮೀನನ್ನು ಗುರುತಿಸಿದ್ದು ಕೆಲ ತಾಂತ್ರಿಕ ಕಾರಣದಿಂದ ನಗರ ಪ್ರದೇಶದಿಂದ ದೂರವಿರುವ ಕಾರಣ ಆ ಸ್ಥಳ ಸಮಂಜಸವಲ್ಲ ಎಂದರು.

Leave a Reply