ಅಂಬರೀಷ್ ದಾಖಲೆಯನ್ನು ಧೂಳಿಪಟ ಮಾಡಿದವರಾರು ಗೊತ್ತಾ? 

ಕನ್ನಡ ಚಿತ್ರರಂಗದ ದಿಗ್ಗಜ ರೆಬೆಲ್ ಸ್ಟಾರ್ ಅಂಬರೀಷ್ ಅವರ ದಾಖಲೆಯು ಪುಡಿ ಪುಡಿಯಾಗಿದೆ! ಸಿನಿಮಾ ರಂಗದಲ್ಲಿ  ಅಂಬರೀಷ್ ರೆಕಾರ್ಡ್ ಬ್ರೇಕ್ ಮಾಡೋರ್ ಯಾರು ಅಂತ ನೀವು ಯೋಚಿಸುತ್ತಿರಬಹುದು. ಆದರೆ ಇದು ಅಂಬಿಯ ಸಿನಿ ವೃತ್ತಿಗೆ ಸಂಬಂಧಿಸಿದ್ದಲ್ಲ. ಇದು ಅವರ ರಾಜಕೀಯ ಬದುಕಿಗೆ ಸಂಬಂದಿಸಿದ್ದು.

 ಕಳೆದ 1998ರಲ್ಲಿ ಮಂಡ್ಯದ ಲೋಕಸಭೆ ಚುನಾವಣೆಯಲ್ಲಿ ಅಂಬರೀಶ ಅವರು 1.80 ಲಕ್ಷ ಮತ ಪಡೆದು ಜಯ ಸಾಧಿಸಿದ್ದು ದಾಖಲೆಯಾಗಿತ್ತು. ಆದರೆ ಈಗ ಆ ದಾಖಲೆಯನ್ನು ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡರು ಮುರಿದಿದ್ದಾರೆ.

ಜೆಡಿಎಸ್ ಭದ್ರಕೋಟೆ ಆಗಿರುವ ಮಂಡ್ಯದಲ್ಲಿ ಶಿವರಾಮೇಗೌಡರು ದಾಖಲೆ ಗೆಲುವನ್ನು ಸಾಧಿಸಿದ್ದಾರೆ.  ಈ ಬಾರಿ ಎಲ್.ಆರ್.ಶಿವರಾಮೇಗೌಡ ಅವರು ಈ ದಾಖಲೆ ಸರಿಗಟ್ಟಿದ್ದು, ಎಂಟು ಸುತ್ತು ಎಣಿಕೆ ಮುಗಿಯುವಷ್ಟರಲ್ಲೇ 2 ಲಕ್ಷಕ್ಕೂ ಅಧಿಕ ಮತಗಳಿಸಿದ್ದಾರೆ. ಎಂದಿನಂತೆ ಮಂಡ್ಯದ ಜನತೆ ಅಭಿವೃದ್ಧಿ ಕೇಂದ್ರಿತ ಆಡಳಿತಕ್ಕೆ ಜೈಕಾರ ಹಾಕಿದ್ದಾರೆ.

 

 

 ಮತ್ತೊಂದು ಕಡೆ ನಾಲ್ಕು  ಕ್ಷೇತ್ರಗಳಲ್ಲಿ ಹೀನಾಯ ಸೋಲನ್ನು ಅನುಭವಿಸಿ, ಬಿಜೆಪಿ ಮುಖಬಂಗ ಅನುಭವಿಸುತ್ತಿದೆ.

Leave a Reply