ಬಳ್ಳಾರಿಯಲ್ಲಿ ಉಗ್ರಪ್ಪ ದಾಖಲೆಯ ಜಯ ; ರೆಡ್ಡಿ ಸಹೋದರರಿಗೆ ಮುಖಬಂಗ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೂರಾಲೋಚನೆ ಮತ್ತು ಸಚಿವ ಡಿ.ಕೆ.ಶಿವಕುಮಾರ್ ಅವರ ರಣವ್ಯೂಹ ಬಿಜೆಪಿಯವರನ್ನು ಚಿತ್ರಾನ್ನ ಮಾಡಿದ್ದು, ಬಳ್ಳಾರಿಯ ಭದ್ರಕೋಟೆಯನ್ನು 14 ವರ್ಷಗಳ ನಂತರ ಭೇದಿಸಿ ನಂತರ ಮತ್ತೊಮ್ಮೆ ಕಾಂಗ್ರೆಸ್ ಬಾವುಟ ಹಾರಿದೆ. ಐದು ಕ್ಷೇತ್ರಗಳ ಉಪಚುನಾವಣೆ ಪೈಕಿ ಬಳ್ಳಾರಿ ಮತ್ತು ಮಂಡ್ಯ ಮೂರೂ ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಮಂಡ್ಯ ಲೋಕಸಭೆ ಮತ್ತು ರಾಮನಗರ ವಿಧಾನಸಭೆ ಚುನಾವಣೆಯ ಫಲಿತಾಂಶ ಕನ್ನಡಿಯಷ್ಟು ಸ್ಪಷ್ಟವಾಗಿತ್ತು. ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ ಎಂದು ಹೇಳಲಾಗುತ್ತಿದ್ದರೂ ಕೊನೆ ಕ್ಷಣದಲ್ಲಿ ಒಂದಷ್ಟು ಗೊಂದಲಗಳಾದವು. ಆದರೆ ಅಂತಿಮವಾಗಿ ಜಮಖಂಡಿ ಕೂಡ ಕಾಂಗ್ರೆಸ್ ಪಾಲಿಗೆ ಒಲಿದಿದೆ.
ಅಕ್ರಮ ಗಣಿಗಾರಿಕೆಯ ಅಧಿಪತಿಗಳಾದ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಅವರು ಅನಭಿಷಿಕ್ತ ದೊರೆಗಳಂತೆ ಮೆರೆಯುತ್ತಿದ್ದರು. ಆದರೆ ಈಗ ಕಾಂಗ್ರೆಸ್  ಅಂದ್ರದವರ ಹಿಡಿತದಿಂದ ಬಳ್ಳಾರಿಯನ್ನು ತಪ್ಪಿಸಿದೆ.
ಆದರೆ ರಣಾಂಗಣದಲ್ಲಿ ಬಲವಾಗಿ ಭೀಮಾರ್ಜುನರಂತೆ ನಿಂತ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಬಿಜೆಪಿಯ ಸೇನೆಯನ್ನು ಛಿದ್ರಗೊಳಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ರಣತಂತ್ರ ಫಲಿಸಿದೆ. ಹಗಲು-ರಾತ್ರಿ ಸಾಮಾನ್ಯ ಕಾರ್ಯಕರ್ತರಂತೆ ಮನೆ ಮನೆ ಸುತ್ತಿ ಸಾಮಾನ್ಯ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಬ್ಬರವಿಲ್ಲದೆ ತನ್ನಷ್ಟಕ್ಕೆ ತಾನು ಮಾಡಿದ ಪ್ರಯತ್ನ ಯಶಸ್ಸು ನೀಡಿದೆ.
ಕೊನೆಗೂ ಕತ್ತಲಿಂದ ಬೆಳೆಕಿನೆಡೆಗೆ ಬಳ್ಳಾರಿಯ ಜನತೆಯಾ ಪ್ರಯಾಣ ಆರಂಭವಾಗಿದೆ.

Leave a Reply