ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ ಯಡಿಯೂರಪ್ಪ ?

ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ೫ ಕ್ಷೇತ್ರದ ಲೋಕಸಭೆ ಉಪಚುನಾವಣೆಯಲ್ಲಿ ಮೈತ್ರಿ ಪಕ್ಷದ ಚಾವಟಿ ಏಟಿಗೆ ಬಿಜೆಪಿ ಪಕ್ಷದ ನಾಯಕರು ಮೂಲೆ ಸೇರಿದ್ದಾರೆ. ಸರಣಿ ಸೋಲಿನಿಂದ ಕಂಗಾಲಾಗಿರುವ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮುಖಬಂಗ ಅನುಭವಿಸುತ್ತಿದ್ದಾರೆ.

ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ದಿಸುವ ಅಭ್ಯರ್ಥಿಯ ಪರ ಪ್ರಚಾರ ಮಾಡುವುದು ಪಕ್ಷದ ನಾಯಕನ ಕರ್ತವ್ಯ. ಆದರೆ ಬಿ.ಎಸ್ ಯಡಿಯೂರಪ್ಪ, ಕೇವಲ್ಲ ತಮ್ಮ ಮಗ ಸ್ಪರ್ದಿಸುತ್ತಿದ್ದ ಶಿವಮೊಗ್ಗ ಕ್ಷೇತ್ರದಲ್ಲಿ ಮಾತ್ರ ಪ್ರಚಾರಕ್ಕಿಳಿದು, ಪಕ್ಷದ ಅಭ್ಯರ್ಥಿಗಳಿಗೆ ವಂಚಿಸಿದ್ದಾರೆ.

ಇದೆ ಕಾರಣದಿಂದ ಚುನಾವಣೆಗೆ ಎರಡು ದಿನ ಬಾಕಿ ಇರುವಾಗ, ರಾಮನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಅವರು ಕಣದಿಂದ ಹಿಂದೆ ಸರಿದು, ಬಿಜೆಪಿ ತೊರೆದಿದ್ದರು.

 

 

ಈಗ ಸರಣಿ ಸೋಲಿಗೆ ಕಾರಣನಾದ ನಾಯಕನ ವಿರುದ್ಧ ಪಕ್ಷದ ಸದ್ಯಸರು ಹಾಗು ಕಾರ್ಯಕರ್ತರೇ ಕಿಡಿ ಕಾರುತ್ತಿದ್ದರೆ. ಪಕ್ಷದ ಯಡಿಯೂರಪ್ಪನ ವಿರುದ್ಧ ಪಕ್ಷದ ಹೈ ಕಮ್ಯಾಂಡ್ ಗೆ ದೂರು ಸಲ್ಲಿಸಲು ಸಜ್ಜಾಗಿದ್ದಾರೆ. ಆದ್ದರಿಂದ ಯಡಿಯೂರಪ್ಪ ಅವರನ್ನು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸುವ ಸಾಧ್ಯತೆ ಹೆಚ್ಚಾಗಿದೆ.

Leave a Reply