ಒಂದೇ ಓವರ್’ನಲ್ಲಿ 43ರನ್ ಗಳಿಸಿ ಕಿವೀಸ್ ಜೋಡಿ ವಿಶ್ವದಾಖಲೆ ..!

ಕ್ರಿಕೆಟ್ ಇತಿಹಾಸದಲ್ಲಿ ಹಲವು ದಾಖಲೆಗಳು ಈಗಾಗಲೇ ದಾಖಲಾಗಿವೆ. ಒಂದೇ ಓವರ್‍ನಲ್ಲಿ 6 ಸಿಕ್ಸರ್ಸ್, 4 ವಿಕೆಟ್‍ಗಳು ಬಿದ್ದಿರುವ ನಿರ್ದೇಶನಗಳಿವೆ. ಈಗ ಮತ್ತೊಂದು ನೂತನ ದಾಖಲೆ ಕ್ರಿಕೆಟ್ ದಿಗ್ಗಜರನ್ನೇ ನಿಬ್ಬೆರಗುಗೊಳಿಸಿದೆ.

ನ್ಯೂಜಿಲೆಂಡ್‍ನ ಇಬ್ಬರು ಬ್ಯಾಟ್ಸ್‍ಮೆನ್‍ಗಳು ಒಂದೇ ಓವರ್‍ನಲ್ಲಿ 43 ರನ್‍ಗಳನ್ನು ಗಳಿಸಲು ಸಾಧ್ಯವೇ? ನಾಲ್ಕು ಬೌಂಡರಿ ಬಾರಿಸಿದರೆ 24 ರನ್‍ಗಳಾಗುತ್ತವೆ, 6 ಸಿಕ್ಸರ್‍ಗಳು ಬಂದರೆ 36 ರನ್ ಗಳಿಸಬಹುದು. 43 ರನ್‍ಗಳು ಹೇಗೆ ಸಾಧ್ಯ ಎಂಬ ಆಶ್ಚರ್ಯ ನಿಮಗೂ ಆಗಬಹುದು. ಸ್ಥಳೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ನ್ಯೂಜಿಲೆಂಡ್‍ನ ಬ್ಯಾಟ್‍ಮೆನ್‍ಗಳಾದ ಜೋಕಾರ್ಟರ್ ಹಾಗೂ ಬ್ರೈಟ್ ಆಂಟನ್ ಅವರು ಈ ದಾಖಲೆಗೆ ನಾಂದಿ ಹಾಡಿದ್ದಾರೆ.

ದಕ್ಷಿಣ ಆಫ್ರಿಕಾದ ವೇಗದ ಬೌಲರ್ ವಿಲಿಯಮ್ ಲ್ಯೂಡಿಕ್ ಮಾಡಿದ ಓವರ್‍ನಲ್ಲಿ ಮೊದಲ ಎಸೆತವೇ ಬೌಂಡರಿ ಆದರೆ, ಎರಡು ಮತ್ತು ಮೂರುನೇ ಎಸೆತಗಳು ನೋಬಾಲ್ ಆಗಿದ್ದವು. ಆ ಎಸೆತಗಳಲ್ಲಿ ಒಟ್ಟು 14 ರನ್‍ಗಳು ಬಂದವು.

ಓವರ್‍ನ 2, 4, 5, 6ನೇ ಎಸೆತಗಳಲ್ಲಿ ಒಟ್ಟು 24 ರನ್‍ಗಳು ಮತ್ತು 3ನೇ ಎಸೆತದಲ್ಲಿ ಒಂದು ರನ್ ಹೀಗೆ ಕಾರ್ಟರ್ ಹಾಗೂ ಆಯಂಟನ್43 ರನ್‍ಗಳನ್ನು ಪ್ರೇರಿಸಿ ನೂತನ ವಿಶ್ವದಾಖಲೆ ಬರೆದರು. ಈ ಪಂದ್ಯದಲ್ಲಿ ಕಾರ್ಟರ್ 66 ಎಸೆತಗಳಲ್ಲೇ 102 ರನ್‍ಗಳಿಸಿದರೆ ಆಯಂಟನ್95 ರನ್‍ಗಳನ್ನು ಬಾರಿಸಿ ತಾವು ಪ್ರತಿನಿಧಿಸಿದ್ದ ನಾರ್ಥನ್ ಡಿಸ್ಟ್ರಿಕ್ ತಂಡದ ಮೊತ್ತವನ್ನು 313 ರನ್‍ಗಳ ಗುರಿ ಮುಟ್ಟಿಸಿದರು.

ಈ ಗುರಿಯನ್ನು ಬೆನ್ನಟ್ಟಿದ ಸೆಂಟ್ರಲ್ ಡಿಸ್ಟ್ರಿಕ್ ತಂಡದ ದಾಂಡಿಗ ಡೀನ್ ಫಾಕ್ಸ್‍ಕ್ರಾಫ್ಸ್ ಅಜೇಯ 120 ರನ್‍ಗಳನ್ನು ಗಳಿಸಿದರೂ 25 ರನ್‍ಗಳನ್ನು ಸೋಲು ಕಂಡಿದೆ.

Leave a Reply