ಪರಪ್ಪನ ಅಗ್ರಹಾರವನ್ನು ಪಿಕ್ನಿಕ್ ತಾಣ ಮಾಡಿಕೊಂಡಿರುವ ಬಿಜೆಪಿ ನಾಯಕರು  

ಹಿಂದುತ್ವದ ಮುಖವಾಡ ಹಾಕಿಕೊಂಡು, ಜನ ಸೇವಕನೆಂದು ಸ್ವತಹ ತಾವೇ ಘೋಷಿಸಿಕೊಂಡು, ಜನರಿಗೆ ಮೋಸ ಮಾಡಿ, ಅಕ್ರಮ ಆಸ್ತಿ ಗಳಿಸಿ, ಜೈಲು ಪಾಲಾಗುವವರೇ ಈ ಪಕ್ಷದ ನಾಯಕರು. ಇದು ಈ ಪಕ್ಷಕ್ಕೆ ಸೇರಬೇಕಾದವರಿಗೆ ಇರಬೇಕಾಗಿರುವ ಕನಿಷ್ಠ ಅರ್ಹತೆ. ಈಗಾಗಲೇ ನಾವು ಮಾತನಾಡುತ್ತಿರುವುದು ಯಾವ ಪಕ್ಷದ ಬಗ್ಗೆ ಎಂದು ನಿಮಗೆ ಗೊತ್ತಾಗಿರುತ್ತದೆ.
ಹೌದು, ನಿಮ್ಮ ಊಹೆ ಸರಿಯಾಗಿದೆ. ಅಕ್ರಮ ಆಸ್ತಿ ಗಳಿಸಿ ಜೈಲು ಪಾಲಾದವನನ್ನು ಪಕ್ಷದ ಅಧ್ಯಕ್ಷನ ಕುರ್ಚಿ ಮೇಲೆ ಕೂರಿಸಿರುವ ಭಾರತೀಯ ಜನತಾ ಪಕ್ಷದ ಬಗ್ಗೆ.
ಯಥಾ ರಾಜ ತಥಾ ಪ್ರಜಾ ಎಂಬಂತೆ, ಪಕ್ಷದ ನಾಯಕ ಬಿ.ಎಸ್ ಯಡಿಯೂರಪ್ಪನಂತೆ ಈ ಪಕ್ಷದ ಹಲವಾರು ಸಧಸ್ಯರು ಅಲಿಯಾಸ್ ಪುಂಡು ಪೋಕರಿಗಳು ಜೈಲೂಟದ ರುಚಿ ನೋಡಿದವರೇ.
ಸರ್ಕಾರಿ ಅಧಿಕಾರಿಗಳು ಟೇಬಲ್ ಕೆಳಗೆ ಅಥವಾ ಸೂಟ್ ಕೇಸ್ ನಲ್ಲಿ ಲಂಚ ಪಡೆಯುವುದನ್ನು ನಾವು ಕೇಳಿರುತ್ತೇವೆ. ಆದರೆ ಚೆಕ್ ನ ಮೂಲಕ ಲಂಚ ಪಡೆದು, ಇತಿಹಾಸ ಬರೆದವರು ಜನ ನಾಯಕ, ಸನ್ಮಾನ್ಯ ಶ್ರೀ. ಬಿ.ಎಸ್ ಯಡಿಯೂರಪ್ಪನವರು.
ಈ ಪಕ್ಷದ ನಾಯಕರು ಮೊದಲು ಬಾರಿ ಪಿಕ್ನಿಕ್ ಗೆ ತೆರಳಿದ್ದು 15 ಅಕ್ಟೋಬರ್, 2011 ರಂದು. ಇವರ ಮೇಲಿದ್ದ ಅಕ್ರಮ ಆಸ್ತಿ ಸಂಪಾಧನೆ ಆರೋಪ ಸಾಭೀತಾಗುತ್ತಿದಂತೆ  ಬಂಧನದಿಂದ ತಪ್ಪಿಸಿಕೊಳ್ಳಲು ತಲೆ ಮರೆಸಿಕೊಂಡಿದ್ದರು. ಆದರೆ, ನಂತರ ಲೋಕಾಯುಕ್ತ ದಾಳಿಗೆ ಬೆದರಿ ತಾವೇ ಸರೆಂಡರ್ ಆದರು.
ಈಗ ಇದೆ ಪಕ್ಷದ ಮಾಜಿ ಸಚಿವ, ಅಕ್ರಮ ಗಣಿ ದಂಧೆಯ ಅಧಿಪತಿ, ಭೂಮಿ ತಾಯಿಯನ್ನು ಬಗೆದು ತಿಂದಿರುವ ನರ ರಾಕ್ಷಸ ಮತ್ತೆ ಪಿಕ್ನಿಕ್ ಗೆ ತೆರಳುವಂತ್ತಿದೆ. ಈಗಾಗಲೇ ಒಮ್ಮೆ ಅಕ್ರಮ ಗಣಿಗಾರಿಕೆಯಲ್ಲಿ ಸಿಕ್ಕಿಬಿದ್ದು ಮೂರು ವರ್ಷ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿದಿದ್ದ ಜನಾರ್ಧನ ರೆಡ್ಡಿ ಈಗ, ಮತ್ತೆ ಬಂಧನಕ್ಕೆ ಒಳಗಾಗುತ್ತಿದ್ದಾರೆ. ರದ್ದಾದ ನೋಟುಗಳನ್ನು ಅಕ್ರಮವಾಗಿ ವರ್ಗಾಯಿಸಿಕೊಂಡು ಸಿಕ್ಕಿಬಿದ್ದಿರುವ ಜನಾರ್ಧನ ರೆಡ್ಡಿ ಮತ್ತೆ ಜೈಲು ಪಾಲಾಗುತ್ತಿದ್ದಾರೆ.
ಒಟ್ಟಿನಲ್ಲಿ ಬಿಜೆಪಿ ಪಕ್ಷದ ನಾಯಕರು ಪರಪ್ಪನ ಅಗ್ರಹಾರವನ್ನು ಪಿಕ್ನಿಕ್ ತಾಣವನ್ನಾಗಿ ಮಾಡಿಕೊಂಡಿದ್ದಾರೆ.

Leave a Reply