ರಾಜ್ಯ ಸರ್ಕಾರದ ನೆರವಿನಿಂದ ನಾಟಿ ಹಸುವಿನ ಹಾಲನ್ನು ಬಿಡುಗಡೆ ಮಾಡಲು ಸಜ್ಜಾಗಿರುವ  ಬಮೂಲ್ 

ಗೋವಿನ ಹಾಲು ಭಾರತೀಯರ ಆಹಾರ ಪದ್ಧಿತಿಯಲ್ಲಿ ಒಂದು ಅವಿಭಾಜ್ಯ ಅಂಗ. ಹಸು ಹಾಲಿನಲ್ಲಿರುವ ಪೌಷ್ಟಿಕ ಅಂಶಗಳು ಎಲ್ಲಿರಿಗೂ ತಿಳಿದಿದ್ದೆ. ನಾಟಿ ಹಸುವಿನ ಹಾಲು ಹೆಚ್ಚು ಸಿಹಿ ಹಾಗು ಪೌಷ್ಟಿಕ ಎಂದು ತಿಳಿದಿದ್ದರೂ, ತಮ್ಮ ಲಾಭಕ್ಕಾಗಿ ಹಾಲು ಉತ್ಪನ್ನ ಮಾಡುವ ಕೇಂದ್ರಗಳು ಹೆಚ್ಚು ಹಾಲು ನೀಡುವ ವಿದೇಶಿ ತಳಿ ಹಸುಗಳ ಮೊರೆ ಹೋಗಿವೆ. ಆದರೆ ಈಗ ರಾಜ್ಯ ಸರ್ಕಾರದ ನೆರವಿನಿಂದ ಡಿಸೆಂಬರ್ ತಿಂಗಳಲ್ಲಿನಾಟಿ ಹಸು ಹಾಲನ್ನು ಮಾರುಕಟ್ಟೆಗೆ ಬಿಡಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿ.

ಬಮೂಲ್, ದೇಸಿ ತಳಿಯ ಹಸುಗಳ ಅಭಿವೃದ್ಧಿಗೆ ಕೆಎಂಎಫ್ ಮತ್ತು ರಾಜ್ಯಸರ್ಕಾರ ನೆರವಿನಿಂದ ಯೋಜನೆ ರೂಪಿಸಿತ್ತು. ರಾಮನಗರ ಜಿಲ್ಲೆಯ ಕನಕಪುರ ಮತ್ತು ಮಾಗಡಿ ತಾಲೂಕಿನ 150 ಹಳ್ಳಿಗಳಲ್ಲಿ ದೇಸಿ ತಳಿಯ ಹಸುಗಳ ಅಭಿವೃದ್ಧಿ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಗೊಳಿಸಲಾಗಿತ್ತು. ಇದೀಗ ಈ ಯೋಜನೆಯ ಫಲಾನುಭವಿ ರೈತರು ಸಾಕಿರುವ ದೇಸಿ ತಳಿಗಳಾದ ಗಿರ್, ಸಾಹಿವಾಲ್, ಹಳ್ಳಿಕಾರ್, ಅಮೃತ್ ಮಹಲ್ ತಳಿಯ ಹಸುಗಳ ಹಾಲು ಖರೀದಿಸಿ ಮಾರುಕಟ್ಟೆಗೆ ಬಿಡಲು ಬಮೂಲ್ ನಿರ್ಧರಿಸಿದೆ.

ಮೊದಲ ಹಂತದಲ್ಲಿ ಸುಮಾರು 4 ರಿಂದ 5 ಸಾವಿರ ದೇಸಿ ತಳಿ ಹಸುಗಳಿಂದ 1000 ಲೀಟರ್‌ನಷ್ಟು ಹಾಲು ಖರೀದಿಸಿ ಬಮೂಲ್ ವ್ಯಾಪ್ತಿಯ (ಬೆಂಗಳೂರು ಡೈರಿಯಿಂದ ಸದಾಶಿವನಗರ, ಮೆಖ್ರಿ ಸರ್ಕಲ್, ಬನಶಂಕರಿ, ಯಶವಂತಪುರ, ಹಲಸೂರು ಪ್ರದೇಶ) ನಂದಿನಿ ಬೂತ್ ಗಳಲ್ಲಿ ಮಾರಾಟ ಮಾಡಲಿದೆ. ಬೇಡಿಕೆಗೆ ತಕ್ಕಂತೆ ಆಯಾ ಪ್ರದೇಶದ ನಂದಿನಿ ಬೂತ್‌ಗಳಿಗೆ ನಾಟಿ ಹಸುಗಳ ಹಾಲು ಪೂರೈಕೆ ಮಾಡುವುದಾಗಿ ಬಮೂಲ್ ತಿಳಿಸಿದೆ.

ಇದೆ ವರ್ಷದ ಡಿಸೆಂಬರ್ ತಿಂಗಳಿಂದ ನಾಟಿ ಹಸುವಿನ ಹಾಲು ನಂದಿನಿ ಕೇಂದ್ರಗಳಲ್ಲಿ ಲಭ್ಯವಿದ್ದು  ರಾಜ್ಯದ ಜನತೆ ಸವಿಯಬಹುದು.

Leave a Reply