ಕೆಎಸ್ಆರ್ ಟಿಸಿ ಗೆ ಕೇಂದ್ರ ಸರ್ಕಾರದಿಂದ ಪ್ರತಿಷ್ಠಿತ ‘ಅವಾರ್ಡ್ ಆಫ್ ಎಕ್ಸಲೆನ್ಸ್’

ಕೆಎಸ್ಆರ್ಟಿಸಿಯು ರಾಜ್ಯದ ಜನತೆಗೆ ತನ್ನ ನಿರತ ಸೇವೆಯಿಂದ  ಭಾರತ ಸರ್ಕಾರದ ಹೌಸಿಂಗ್ ಮತ್ತು ನಗರಾಭಿವೃದ್ಧಿ ಇಲಾಖೆಯ ಶ್ರೇಷ್ಠತಾ ಪ್ರಶಸ್ತಿಯನ್ನು ಪಡೆದುಕೊಂಡಿದೆ. ರಾಜ್ಯದ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಾರಿಗೆ ಸಚಿವ ಡಿ.ಸಿ ತಮಣ್ಣ ಅವರು ಸಾರಿಗೆ ಇಲಾಖೆಯಲ್ಲಿ ಇರುವ ಲೋಪದೋಷಗಳನ್ನು ಸರಿಪಡಿಸಿ, ಕೆಎಸ್ ಆರ್ಟಿಸಿಯು ಈ ಪ್ರಶಸ್ತಿ ಗಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಹೀನಾಯ ಸ್ಥಿತಿಯನ್ನು ತಲುಪಿದ್ದ ಸಾರಿಗೆ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಮಟ್ಟ ಹಾಕಿ , ಬಸ್ ಗಳ ಗುಣಮಟ್ಟವನ್ನು ಹೆಚ್ಚಿಸಿ, ಸಮಯ ಪ್ರಜ್ಞೆ ಕಳೆದುಕೊಂಡಿದ್ದ ಚಾಲಕರಿಗೆ ತಿಳಿ ಹೇಳಿ ಈ ಸಾಧನೆಗೆ ಕುಮಾರಸ್ವಾಮಿ ಅವರ ಸರ್ಕಾರ ರೂವಾರಿಯಾಗಿದೆ.

ಕೆಎಸ್ಆರ್ ಟಿಸಿಯು ಅನುಷ್ಠಾನಗೊಳಿಸಿರುವ ಯಶಸ್ವಿ ಉಪಕ್ರಮವಾದ ಸಣ್ಣ ಮತ್ತು ಮಧ್ಯಮ ನಗರ ಹಾಗೂ ಪಟ್ಟಣಗಳಲ್ಲಿ ನಗರ ಸಾರಿಗೆ ಸೇವೆಗೆ, ದೊರಕಿದೆ. ಈ ಪ್ರಶಸ್ತಿಯನ್ನು ಬರುವ ನವೆಂಬರ್ 4 ರಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಯುವ 11ನೇ ‘ಅರ್ಬನ್ ಮೊಬಿಲಿಟಿ’ ಸಮ್ಮೇಳನ ಮತ್ತು ಪ್ರದರ್ಶನದಲ್ಲಿ ಮಹಾರಾಷ್ಟ್ರ ಸರ್ಕಾರದ ಇಂಧನ ಸಚಿವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಒಟ್ಟು 16 ಸಣ್ಣ ಹಾಗೂ ಮಧ್ಯಮ ನಗರ ಮತ್ತು ಪಟ್ಟಣಗಳಲ್ಲಿ ತನ್ನ ಸೇವೆಯನ್ನು ಒದಗಿಸುತ್ತಿದೆ. ಪ್ರತಿದಿನ 786 ಬಸ್ಗಳು 11,075 ಟ್ರಿಪ್ ಗಳಷ್ಟು ಸಂಚಾರ ಮಾಡುತ್ತವೆ. 5.10 ಲಕ್ಷ ಪ್ರಯಾಣಿಕರು ಈ ಬಸ್ಗಳಲ್ಲಿ ಸಂಚರಿಸುತ್ತಿದ್ದಾರೆ. ಈ ಉತ್ತಮ ವ್ಯವಸ್ಥೆಗೆ ಫಲವೆಂಬಂತೆ ಪ್ರಶಸ್ತಿ ಲಭಿಸಿರುವುದು ಕೆ.ಎಸ್.ಆರ್.ಟಿ.ಸಿ.ಗೆ ಮಾತ್ರವಲ್ಲದೆ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ.

Leave a Reply